ವಿಟ್ಲಮುಡ್ನೂರು : ಅಕ್ರಮ ಸುಡುಮದ್ದು ತಯಾರಿಕಾ ಶೆಡ್ಡಿನಲ್ಲಿ ಸ್ಫೋಟ : ಸ್ಥಳೀಯರಲ್ಲಿ ಆತಂಕ - Karavali Times ವಿಟ್ಲಮುಡ್ನೂರು : ಅಕ್ರಮ ಸುಡುಮದ್ದು ತಯಾರಿಕಾ ಶೆಡ್ಡಿನಲ್ಲಿ ಸ್ಫೋಟ : ಸ್ಥಳೀಯರಲ್ಲಿ ಆತಂಕ - Karavali Times

728x90

6 March 2026

ವಿಟ್ಲಮುಡ್ನೂರು : ಅಕ್ರಮ ಸುಡುಮದ್ದು ತಯಾರಿಕಾ ಶೆಡ್ಡಿನಲ್ಲಿ ಸ್ಫೋಟ : ಸ್ಥಳೀಯರಲ್ಲಿ ಆತಂಕ

 ಬಂಟ್ವಾಳ, ಮಾರ್ಚ್ 06, 2026 (ಕರಾವಳಿ ಟೈಮ್ಸ್) : ಅಕ್ರಮ ಸುಡುಮದ್ದು ತಯಾರಿಕಾ ಶೆಡ್ಡಿನಲ್ಲಿ ಸ್ಫೋಟಗೊಂಡ ಘಟನೆ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು-ನೂಜಿ ಎಂಬಲ್ಲಿ ಮಾರ್ಚ್ 6 ರಂದು ಸಂಜೆ ವೇಳೆ ಸಂಭವಿಸಿದೆ. ಘಟನೆಯಿಂದ ಸ್ಥಳೀಯವಾಗಿ ಭಾರೀ ಸದ್ದು ಕೇಳಿ ಬಂದಿದ್ದು, ಜನ ತೀವ್ರ ಆತಂಕಿತರಾಗಿದ್ದರು. 

ಈ ಬಗ್ಗೆ ವಿಟ್ಲಮುಡ್ನೂರು ಗ್ರಾಮದ ಪ್ರಭಾರ ಆಡಳಿತ ಅಧಿಕಾರಿ ಸತೀಶ್ ಸುವರ್ಣ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಮಾ 6 ರಂದು ಸಂಜೆ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿ ಎಂಬಲ್ಲಿ ಸುಡುಮದ್ದು ಸ್ಪೋಟಗೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಕಂದಾಯ ನಿರೀಕ್ಷಕ ರವಿ ಎಂಬವರೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸದ್ರಿ ಸ್ಥಳದಲ್ಲಿರುವ ಸರಕಾರಿ ಜಮೀನಿನಲ್ಲಿ, ಸ್ಥಳೀಯ ನಿವಾಸಿ, ಆರೋಪಿತ ಅಬ್ದುಲ್ ಗಫೂರ್ ಎಂಬಾತ ಅಕ್ರಮವಾಗಿ ಶೆಡ್ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡು ಮದ್ದುಗಳನ್ನು ತಯಾರಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಮತ್ತು ಬೇಜಾವಬ್ದಾರಿಯಿಂದ ಅಕ್ರಮವಾಗಿ ದಾಸ್ತಾನಿರಿಸಿದ್ದು, ಸದ್ರಿ ಸುಡುಮದ್ದುಗಳು ಸ್ಪೋಟಗೊಂಡಿರುವುದಾಗಿದೆ. 

ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮರಗಳು ಸುಟ್ಟು ಹೋಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಅಬ್ದುಲ್ ಗಫೂರ್  ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲಮುಡ್ನೂರು : ಅಕ್ರಮ ಸುಡುಮದ್ದು ತಯಾರಿಕಾ ಶೆಡ್ಡಿನಲ್ಲಿ ಸ್ಫೋಟ : ಸ್ಥಳೀಯರಲ್ಲಿ ಆತಂಕ Rating: 5 Reviewed By: karavali Times
Scroll to Top