ಬಂಟ್ವಾಳ, ಮಾರ್ಚ್ 02, ಮಾರ್ಚ್, 2026 (ಕರಾವಳಿ ಟೈಮ್ಸ್) : ಬೆಳಿಗ್ಗೆ ಕುಸಿದು ಬಿದ್ದಿದ್ದ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಗೆ ಅಳವಡಿಸಲಾಗಿದ್ದ ಕಬ್ಬಿಣದ ಕಮಾನು ಸಂಜೆ ವೇಳೆಗೆ ಮತ್ತೆ ಮೇಲೇರಿದೆ. ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಅಳವಡಿಸಲಾಗಿದ್ದ ಕಬ್ಬಿಣದ ಕಮಾನು ಸಂಜೆ ವೇಳೆ ಮತ್ತೆ ಯಥಾ ಸ್ಥಿತಿಯಲ್ಲಿ ಅದೇ ಕಂಬಕ್ಕೆ ಅಳವಡಿಸಲಾಗಿರುವುದು ಕಂಡು ಬಂದಿದೆ.
ವಾಹನ ಡಿಕ್ಕಿಯಾಗಿ ಕುಸಿದು ಬೀಳುವುದು ಬಳಿಕ ಅದೇ ಕಮಾನನ್ನು ಮತ್ತೆ ಯಥಾ ಸ್ಥಿತಿ ಅಳವಡಿಸುವ ಈ ಕ್ರಮ ಇದೀಗ ಸಾರ್ವಜನಿಕರ ಪಾಲಿಗೆ ಅಸುರಕ್ಷತೆ ಭಾವನೆ ಮೂಡಿಸಿದೆ. ಯಾವುದೇ ಸುರಕ್ಷತೆ ಇಲ್ಲದೆ ಅಳವಡಿಸಲಾಗುತ್ತಿರುವ ಇಲ್ಲಿನ ಕಬ್ಬಿಣದ ಕಮಾನಿನ ಬಗ್ಗೆ ಜನರ ಆತಂಕ ವ್ಯಕ್ತಪಡಿಸಿದ್ದಾರೆ. ವಾಹನ ಸವಾರರ ಹಾಗೂ ಸಾರ್ವಜನಿಕರ ಪಾಲಿಗೆ ಗಂಭೀರ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಇಲ್ಲಿನ ಕಮಾನಿನ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಭದ್ರವಾಗಿ ಅಳವಡಿಸುವಂತೆ ಇಲ್ಲಿನ ಜನ ಆಗ್ರಹಿಸಿದ್ದಾರೆ.















0 comments:
Post a Comment