ಎಂಎಲ್ಸಿ ಐವನ್ ಡಿಸೋಜ ನೇತೃತ್ವದಲ್ಲಿ 11ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ
ಮಂಗಳೂರು, ಮಾರ್ಚ್ 09, 2026 (ಕರಾವಳಿ ಟೈಮ್ಸ್) : ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಬಾಳಿದಾಗ ಮಾತ್ರ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಹಾಗೂ ಸಹೋದರತೆ ಮೂಡಿ ಬರಲು ಸಾಧ್ಯ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಎಂಎಲ್ಸಿ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ 11ನೇ ವರ್ಷದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ಇಫ್ತಾರ್ ಕೂಟ, ದೀಪಾವಳಿ, ಕ್ರಿಸ್ಮಸ್ ಇಂತಹ ಸರ್ವಧರ್ಮದ ಹಬ್ಬಗಳನ್ನು ಆಚರಿಸುತ್ತಾ ಬರುತ್ತಿರುವುದು ಅವರ ಅಪರೂಪದ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಸಮಾಜದಲ್ಲಿ ಬಾಂಧವ್ಯದ ಬೆಸುಗೆ ಬೆಸೆಯಬೇಕಾದ ಹಬ್ಬಗಳು ಇಂದು ಆತಂಕಕ್ಕೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಐವನ್ ಅವರ ಸತತವಾಗಿ ಹಬ್ಬಗಳನ್ನು ಏರ್ಪಾಡು ಮಾಡುವ ಮೂಲಕ ಸರ್ವಧರ್ಮಗಳ ಸಮನ್ವಯತೆ ಸಾಧಿಸುವ, ಸರ್ವ ಧರ್ಮಗಳ ಪ್ರೀತಿಸುವು ಹಾಗೂ ಸರ್ವ ಧರ್ಮಗಳನ್ನು ಗೌರವಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಕುದ್ರೋಳಿ-ನಡುಪಳ್ಳಿ ಜುಮಾ ಮಸೀದಿ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ಅವರು ಮಾತನಾಡಿ, ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರೆ ಫಾ ಜೆ.ಬಿ. ಸಾಲ್ದಾನಾ ಮಾತನಾಡಿ, ಸಮಾಜದಲ್ಲಿ ಏಕತೆ ಮತ್ತು ಏಲ್ಲಾ ಧರ್ಮಗಳ ಸಾರಗಳು ಒಂದೇ ಆಗಿದ್ದು ಪ್ರತಿಯೊಬ್ಬರೂ ಎಲ್ಲಾ ಧರ್ಮಗಳನ್ನು ಪ್ರೀತಿಸಬೇಕು. ಪರಸ್ಪರ ಪ್ರತಿಯ ಮೂಲಕ ಸಮಾಜನ್ನು ಗೆಲ್ಲಬಹುದು. ಅಸೂಯೆ ಮತ್ತು ದ್ವೇಷದ ಮೂಲಕ ಸಮಾಜದಲ್ಲಿ ಯಾವುದೇ ಒಳ್ಳೆಯ ಕೆಲಸಗಳು ನಡೆಯುವುದಿಲ್ಲ ಎಂದರು.
ಮಂಗಳೂರು ವಿವಿ ಕುಲಪತಿ ಪೆÇ್ರ. ಪಿ.ಎಲ್. ಧರ್ಮ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ಸಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಭಾಸ್ಕರ್ ಶೆಟ್ಟಿ, ರೋಹನ್ ಕಾಪೆರ್Çರೇಷನ್À ಮುಖ್ಯಸ್ಥ ರೋಹನ್ ಮೊಂತೆರೋ, ಮೂಡಾ ಕಮಿಷನರ್ ಮುಹಮ್ಮದ್ ನಝೀರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆನರಾ ಚೇಂಬರ್ ಆಫ್ ಕಾಮರ್ಸ್ ಇದರ ಅಹ್ಮದ್ ಮುದಸ್ಸರ್ ಹಾಗೂ ರಶೀದ್ ಹಾಜಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸರ್ಕಾರಿ ಪ್ಲೀಡರ್ ಹಾಗೂ ಹಿರಿಯ ವಕೀಲ ಎಂ.ಪಿ. ನೊರೊನ್ಹಾ, ಜೆರೋಸಾ ಶಿಕ್ಷಣ ಸಂಸ್ಥೆಯ ಸಿಸ್ಟರ್ ಅರ್ಪಿತಾ, ಪ್ರಮುಖರಾದ ಮೈಕಲ್ ಡಿಸೋಜಾ, ಅಬ್ದುಲ್ ಸಲೀಂ, ಶಾಹುಲ್ ಹಮೀದ್, ಸಿ.ಎಂ. ಮುಸ್ತಾಫಾ ಸುಳ್ಯ, ನಾರಾಯಣ್ ಕೋಟ್ಯಾನ್ ಹಾಗೂ ರಿಚರ್ಡ್ ಬೆಳಗಂ, ನಾಗೇಂದ್ರ ಕುಮಾರ್, ಮಹಮ್ಮದ್ ಗುಲಾಂ ಮೊದಲಾದವರು ಭಾಗವಹಿಸಿದ್ದರು. ಶಾಸಕ ಐವನ್ ಡಿಸೋಜಾ ಸ್ವಾಗತಿಸಿ, ಚೇತನ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.












0 comments:
Post a Comment