ಮಂಗಳೂರು, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಲ್ಲಿ ಮಂಗಳೂರು ನಗರಕ್ಕೆ 40 ಕೋಟಿ ಅನುದಾನ ಮಂಜೂರಾಗಿರುತ್ತದೆ. ಸದರಿ ಯೋಜನೆಯಡಿ ಈ ಕೆಳಕಂಡ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಪಚ್ಚನಾಡಿ ಪ್ರದೇಶದಲ್ಲಿರುವ ಎ ಎಸ್ ಪಿ (ಆಕ್ಟಿವೇಟೆಡ್ ಸ್ಲಡ್ಜ್ ಪ್ರೊಸೆಸ್) ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಟಿ.ಪಿಯನ್ನು ಎಸ್ ಬಿ ಆರ್ (ಸೀಕ್ವೆನ್ಸಿಂಗ್ ಬ್ಯಾಚ್ ರಿಯಾಕ್ಟರ್) ತಂತ್ರಜ್ಞಾನಕ್ಕೆ ಮೇಲ್ದರ್ಜೇಗೇರಿಸುವ ಕಾಮಗಾರಿಗೆ 6.87 ಕೋಟಿಗಳು. ಬಜಾಲ್ ಎಸ್.ಟಿ.ಪಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಬಬಲ್ ಡಿಫ್ಯೂಸರ್, ಏರ್ ಬ್ಲೋಯರ್ ಮತ್ತು ಕಂಟ್ರೋಲ್ ಪ್ಯಾನೆಲ್‍ಗಳನ್ನು ಅಳವಡಿಸುವ ಕಾಮಗಾರಿಗೆ 3.22 ಕೋಟಿಗಳು. ಅತ್ತಾವರ ಪ್ರದೇಶದಲ್ಲಿ ಹೊಸ ವೆಟ್ ವೆಲ್ ನಿರ್ಮಾಣ ಕಾಮಗಾರಿಗೆ 3.33 ಕೋಟಿಗಳು, ಮಂಗಳೂರು ನಗರದಲ್ಲಿ ಆಯ್ದ ಭಾಗಗಳಲ್ಲಿ 8.20 ಕಿ.ಮೀ ಉದ್ದದ ಮುಖ್ಯ ಒಳಚರಂಡಿ ಕೊಳವೆಯ ಉನ್ನತೀಕರಣ ಕಾಮಗಾರಿಗೆ 16.13 ಕೋಟಿಗಳು.
ಮಂಗಳೂರು ನಗರಕ್ಕೆ ಒಳಚರಂಡಿ ವ್ಯವಸ್ಥೆಯ ನಿರ್ಮಾಣ/ ಉನ್ನತೀಕರಣ ಕಾಮಗಾರಿಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪಚ್ಚನಾಡಿ ಎಸ್ ಟಿ ಪಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಜೊತೆಗಿದ್ದರು.





















0 comments:
Post a Comment