ಮುಲ್ಕಿ, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಮುಲ್ಕಿ ಠಾಣಾ ಕ್ರೈಂ ಸಂಖ್ಯೆ 11/2022 ನ್ಯಾಯಾಲಯದ ಎಸ್ ಸಿ ಸಂಖ್ಯೆ 91/2022, ಕಲಂ 302 ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾದ ಜಗದೀಶ್ ವಿ ಎನ್ ಅವರು ಆರೋಪಿ ಮುರುಗನ್ ಎಂಬಾತನಿಗೆ ಕಲಂ 302 ಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 2022 ಮಾರ್ಚ್ 19 ರಂದು ರಾತ್ರಿ ಸುಮಾರು 9.45ಕ್ಕೆ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯ ಟೂರಿಸ್ಟ್ ಕಾರು ಪಾರ್ಕಿಂಗ್ ಬಳಿ ಉಲ್ಲಂಜೆ ಎಂಬಲ್ಲಿಯ ಹರೀಶ್ ಸಾಲ್ಯಾನ್ (47) ಎಂಬಾತನ ಮುಖಕ್ಕೆ ಹಣಕಾಸಿನ ದ್ವೇಷದಿಂದ ಆರೋಪಿ ಮುರುಗನ್ ಎಂಬಾತ ಸಿಮೆಂಟ್ ಕಾಂಕ್ರಿಟ್ ಸಹಿತ ಇರುವ ಕೆಂಪು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸಂಪೂರ್ಣ ತನಿಖೆಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಕುಸುಮಾಧರ್ ಅವರು ನಡೆಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಎಎಸ್ಸೈ ಸಂಜೀವ್ ಅವರು ಸಹಕರಿಸಿರುತ್ತಾರೆ. ಸರ್ಕಾರದ ಪರ ಸರಕಾರಿ ಅಭಿಯೋಜಕಿ ಶ್ರೀಮತಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದಾರೆ.


















0 comments:
Post a Comment