ಕರ್ವೇಲು : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸುತ್ತಿದ್ದಾತ ಉಪ್ಪಿನಂಗಡಿ ಪೊಲೀಸರ ಬಲೆಗೆ - Karavali Times ಕರ್ವೇಲು : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸುತ್ತಿದ್ದಾತ ಉಪ್ಪಿನಂಗಡಿ ಪೊಲೀಸರ ಬಲೆಗೆ - Karavali Times

728x90

22 March 2026

ಕರ್ವೇಲು : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸುತ್ತಿದ್ದಾತ ಉಪ್ಪಿನಂಗಡಿ ಪೊಲೀಸರ ಬಲೆಗೆ

ಉಪ್ಪಿನಂಗಡಿ, ಮಾರ್ಚ್ 23, 2026 (ಕರಾವಳಿ ಟೈಮ್ಸ್) : ಮಾದಕ ದ್ರವ್ಯ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಕಾಸರಗೋಡು ಮೂಲದ ಯುವಕನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಕರ್ವೇಲು ಎಂಬಲ್ಲಿ ಮಾ 22 ರಂದು ನಡೆದಿದೆ. 

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕಾಸರಗೋಡು ನಿವಾಸಿ ಯೂಸುಫ್ ಸಿ ಇ (28) ಎಂದು ಹೆಸರಿಸಲಾಗಿದೆ. ಮಾ 22 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ವೇಲು ಎಂಬಲ್ಲಿ ಯುವಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೆÇಲೀಸರು ಸ್ಥಳಕ್ಕೆ ತೆರಳಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕರ್ವೇಲು : ಮಾದಕ ವಸ್ತು ಸೇವಿಸಿ ಅನುಚಿತ ವರ್ತಿಸುತ್ತಿದ್ದಾತ ಉಪ್ಪಿನಂಗಡಿ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top