ಬಂಟ್ವಾಳ, ಮಾರ್ಚ್ 23, 2026 (ಕರಾವಳಿ ಟೈಮ್ಸ್) : ವ್ಯಕ್ತಿಗೆ ಸಹೋದರರಿಬ್ಬರು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದ ಗಾಯಗೊಂಡವರನ್ನು ನಾವೂರು ಗ್ರಾಮದ ಕೊಪ್ಪಳ ನಿವಾಸಿ ಬೇಬಿ ಪೂಜಾರಿ (49) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಪ್ರಜ್ವಲ್ ಹಾಗೂ ಆತನ ಸಹೋದರ ರಂಜಿತ್ ಎಂದು ಗುರುತಿಸಲಾಗಿದೆ. ಬೇಬಿ ಪೂಜಾರಿ ಅವರು ಮಾ 21 ರಂದು ಸಂಜೆ ಸುಮಾರು 7.45 ರ ವೇಳೆಗೆ ತನ್ನ ಮನೆಯ ಸಮೀಪ ಇರುವ ನಾವೂರು ಗ್ರಾಮದ ಕೊಪ್ಪಳ ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ ಕುಳಿತುಕೊಂಡು ಬಸ್ಸು ನಿಲ್ದಾಣದಲ್ಲಿದ್ದ ಅಪರಿಚಿತ ವ್ಯಕ್ತಿಯೊಂದಿಗೆ ಮಾತಾನಾಡುತ್ತಿರುವಾಗ ಬೈಕಿನಲ್ಲಿ ಬಂದ ಪರಿಚಯದ ಪ್ರಜ್ವಲ್ ಎಂಬಾತನು ಅಪರಿಚಿತ ವ್ಯಕ್ತಿಯಲ್ಲಿ ಬೇಬಿ ಪೂಜಾರಿಯನ್ನುದ್ದೇಶಿಸಿ “ಆಯೇ ಏರ್ಯಾ” ತುಳು ಭಾಷೆಯಲ್ಲಿ ಏಕವಚನದಲ್ಲಿ ಕೇಳಿ ಬೈಕಿನಲ್ಲಿ ತೆರಳಿರುತ್ತಾನೆ, ಆಗ ಬೇಬಿ ಅವರು ಅಪರಿಚಿತ ವ್ಯಕ್ತಿಯಲ್ಲಿ ಪ್ರಜ್ವಲ್ ಎಂಬವನ ತಂದೆಗೆ ಮೊದಲು ಮಾಡಿದ ಸಹಾಯದ ಬಗ್ಗೆ ಹೇಳಿ ಈಗ ನನ್ನನ್ನೆ ಏರ್ಯಾ ಎಂದು ಕೇಳುತ್ತಾರೆ ಎಂದು ಹೇಳಿರುತ್ತಾರೆ.
ಬಳಿಕ ಬೇಬಿ ಪೂಜಾರಿ ಮನೆಗೆ ಬಂದು ಮನೆಯ ಜಗುಲಿಯಲ್ಲಿ ಕುಳಿತುಕೊಂಡು ಮೊಬೈಲ್ ನೋಡಿಕೊಂಡಿರುವಾಗ ರಾತ್ರಿ 8.15 ಗಂಟೆಗೆ ಏಕಾಏಕಿ ಅಲ್ಲಿಗೆ ಬಂದ ಪ್ರಜ್ವಲ್ ಹಾಗೂ ಆತನ ತಮ್ಮ ರಂಜಿತ್ ಮನೆಯ ಜಗುಲಿಗೆ ಬಂದು ಬಸ್ಸು ನಿಲ್ದಾಣ ನಿನ್ನ ಅಪ್ಪನ್ನದ್ದಾ, ನನ್ನ ತಂದೆಗೆ ನೀನು ಏನು ಸಹಾಯ ಮಾಡಿದ್ದಿ ಎಂದು ಅವಾಚ್ಯವಾಗಿ ಬೈದು ಪ್ರಜ್ವಲನು ಬೇಬಿ ಅವರ ಬಲ ಮತ್ತು ಎಡ ಕೆನ್ನೆಗೆ ಕೈಯಿಂದ ಹೊಡೆದಿದ್ದಾನೆ. ರಂಜಿತ್ ಕೂಡ ಕೆನ್ನೆಗೆ ಕೈಯಿಂದ ಹೊಡೆದಿದ್ದಾನೆ. ಈ ಸಂದರ್ಭ ಬೇಬಿ ಅವರು ತಕ್ಷಣ ಮನೆಯೊಳಗೆ ಓಡಿ ಹೋಗಿದ್ದು, ಅವರೂ ಕೂಡ ಮನೆಯೊಳಗೆ ಬಂದು ಹಲ್ಲೆ ನಡೆಸಿ ಮನೆಯಿಂದ ಹೊರೆಗೆ ಎಳೆದೊಯ್ದು ದೂಡಿ ಹಾಕಿ ಎದೆಗೆ ತುಳಿದು, ಭುಜಕ್ಕೆ ಹೊಡೆದು ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಇಬ್ಬರು ಅಲ್ಲಿಂದ ಹೋಗಿರುತ್ತಾರೆ. ಆ ಸಮಯ ರವಿ ಪೂಜಾರಿ, ಅಶೋಕ್ ಹಾಗೂ ಬಸ್ಸು ನಿಲ್ದಾಣದಲ್ಲಿದ್ದ ಅಪರಿಚಿತ ವ್ಯಕ್ತಿ ಅಲ್ಲಿ ಇದ್ದು ಘಟನೆಯನ್ನು ನೋಡಿರುತ್ತಾರೆ. ಹಲ್ಲೆಯಿಂದಾಗಿ ಬೇಬಿ ಪೂಜಾರಿ ಅವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment