ಸುಳ್ಯ, ಮಾರ್ಚ್ 16, ಮಾರ್ಚ್, 2026 (ಕರಾವಳಿ ಟೈಮ್ಸ್) : ಸುಳ್ಯ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ, ನ್ಯಾಯಾಲಯದಿಂದ 15 ದಿನಗಳ ಸಾಮುದಾಯಿಕ ಸೇವೆ ಶಿಕ್ಷೆಗೆ ಗುರಿಯಾಗಿದ್ದ ಸುಳ್ಯ ನಿವಾಸಿ ರಕ್ಷಿತ್ ಜಿ (29) ಎಂಬಾತನು, ನ್ಯಾಯಾಲಯದ ಅದೇಶದಂತೆ ಮಾರ್ಚ್ 15 ರಂದು ಸಾಮುದಾಯಿಕ ಸೇವೆಯಾಗಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮತ್ತು ನಿಯಂತ್ರಣ ಕಾರ್ಯವನ್ನು ನಿರ್ವಹಿಸಿರುವುದಾಗಿದೆ.
ಮುಂದುವರಿದಂತೆ ಮಾ 15 ರಂದು ತಾನು ಸಲ್ಲಿಸಿದ ಸಾಮುದಾಯಿಕ ಸೇವೆಯ ವಿಚಾರ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿರುವುದನ್ನು, ಮನೆಯಲ್ಲಿದ್ದಾಗ ಗಮನಿಸಿದ ರಕ್ಷಿತ್ ಜಿ ಅವರು ಇದರಿಂದ ಬೇಸರಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












0 comments:
Post a Comment