ಬಂಟ್ವಾಳ, ಮಾರ್ಚ್ 03, ಮಾರ್ಚ್, 2026 (ಕರಾವಳಿ ಟೈಮ್ಸ್) : ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿ ಕಾರ್ಯಾಚರಣೆ ನಡೆಸುತ್ತಿರುರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಕೂಡಲೇ ತೆರವುಗೊಳಿಸಬೇಕು ಎಂದು ಮಾಜಿ ಸಚಿವ, ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಆಗ್ರಹಿಸಿದರು.
ಸಮಾನ ಮನಸ್ಕ ಸಂಘಟನೆಗಳ ಒಗ್ಗೂಡುವಿಕೆಯ ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ವತಿಯಿಂದ ಮಾ 3 ರಂದು ಟೋಲ್ ಗೇಟ್ ಬಳಿ ನಡೆದ ಸಾಮೂಹಿಕ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ರಹ್ಮರಕೊಟ್ಲು ಟೋಲ್ ಪ್ಲಾಜಾ ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿದ್ದು ಇದು ಜನತೆಗೆ ಮಾಡುವ ಮಹಾ ಮೋಸ ಮತ್ತು ಹಗಲು ದರೋಡೆಯಾಗಿದೆ. ಇದರ ವಿರುದ್ಧ ಪಕ್ಷಾತೀತವಾಗಿ ಸಂಘಟಿತವಾಗಿ ಸಕ್ರಿಯ ಹೋರಾಟಗಳನ್ನು ನಿರಂತರ ಮಾಡಲಾಗುವುದು. ಇಂದು ಧರಣಿ ಆರಂಭ ಅಷ್ಟೇ, ಮುಂದಿನ ದಿನಗಳಲ್ಲಿ ಈ ಬಗ್ಗೆ ಅವಿರತವಾಗಿ ಹೋರಾಟ ನಡೆಸಲಾಗುವುದು. ಪ್ರತೀ ಹಂತದಲ್ಲೂ ಈ ಹೋರಾಟಕ್ಕೆ ಎಲ್ಲವರೂ ಕೈಜೋಡಿಸಬೇಕು ಎಂದರು.
ಪ್ರಮುಖರಾದ ಮುನೀರ್ ಕಾಟಿಪಳ್ಳ, ಎಂ ಜಿ ಹೆಗ್ಡೆ, ಸುಹೈಲ್ ಖಂದಕ್, ಸುರೇಶ್ ಕುಮಾರ್, ಅಶ್ವನಿ ಕುಮಾರ್ ರೈ, ಎಂ ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೆ ಪದ್ಮನಾಭ ರೈ, ಸದಾಶಿವ ಪಡುಬಿದ್ರಿ, ಸುನಿಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್, ಮಮತಾ ಗಟ್ಟಿ, ಎ ರಾಮಣ್ಣ ವಿಟ್ಲ, ಬಿ ಎಂ ಭಟ್, ಹೇಮನಾಥ ಶೆಟ್ಟಿ ಕಾವು ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು. ಸಮಿತಿ ಸಂಚಾಲಕರಾದ ಬಿ ಶೇಖರ್ ಸ್ವಾಗತಿಸಿ, ಮೋಹನ್ ಶೆಟ್ಟಿ ವಂದಿಸಿದರು.

















0 comments:
Post a Comment