17 ವರ್ಷಳಿಂದ ತಲೆ ಮರೆಸಿಕೊಂಡಿದ್ದ ಕಾಪಿ ರೈಟ್ ಪ್ರಕರಣದ ಆರೋಪಿ ಅರೆಸ್ಟ್ - Karavali Times 17 ವರ್ಷಳಿಂದ ತಲೆ ಮರೆಸಿಕೊಂಡಿದ್ದ ಕಾಪಿ ರೈಟ್ ಪ್ರಕರಣದ ಆರೋಪಿ ಅರೆಸ್ಟ್ - Karavali Times

728x90

24 March 2026

17 ವರ್ಷಳಿಂದ ತಲೆ ಮರೆಸಿಕೊಂಡಿದ್ದ ಕಾಪಿ ರೈಟ್ ಪ್ರಕರಣದ ಆರೋಪಿ ಅರೆಸ್ಟ್

ಮಂಗಳೂರು, ಮಾರ್ಚ್ 24, 2026 (ಕರಾವಳಿ ಟೈಮ್ಸ್) : ಕಾಪಿ ರೈಟ್ ಪ್ರಕರಣದಲ್ಲಿ ಸುಮಾರು 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬರ್ಕೆ ಠಾಣಾ ಪೊಲೀರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ದೇರಳಕಟ್ಟೆ-ನಾಟೆಕಲ್ ನಿವಾಸಿ ರಿಯಾಜ್ ಎಂದು ಹೆಸರಿಸಲಾಗಿದೆ. ಬರ್ಕೆ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 15/2009 ಕಲಂ 52(ಎ),63 ಕಾಪಿ ರೈಟ್ ಕಾಯ್ದೆ ಪ್ರಕರಣದಲ್ಲಿ  ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು 2016ರಲ್ಲಿ ಸದ್ರಿ ಪ್ರಕರಣವನ್ನು  ಎಲ್ ಪಿ  ಸಿ 79/2016 ಪ್ರಕರಣವಾಗಿ ಪರಿವರ್ತಿಸಿದೆ. ಪ್ರಕರಣದಲ್ಲಿ ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿದ್ದ ಆರೋಪಿ ರಿಯಾಜ್ ಎಂಬಾತನನ್ನು ಮಾರ್ಚ್ 24 ರಂದು ಬರ್ಕೆ  ಪೆÇಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: 17 ವರ್ಷಳಿಂದ ತಲೆ ಮರೆಸಿಕೊಂಡಿದ್ದ ಕಾಪಿ ರೈಟ್ ಪ್ರಕರಣದ ಆರೋಪಿ ಅರೆಸ್ಟ್ Rating: 5 Reviewed By: karavali Times
Scroll to Top