ಮಂಗಳೂರು, ಎಪ್ರಿಲ್ 23, 2026 (ಕರಾವಳಿ ಟೈಮ್ಸ್) : ತೊಕ್ಕೊಟ್ಟು ಫ್ಲೈ ಓವರ್ ಮೇಲೆ ನಡೆದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಕೋಕಾ ಕಾಯ್ದೆಯಡಿ ತನಿಖೆ ಆರಂಭಿಸಿರುವ ಪೊಲೀಸರು ಫೆಬ್ರವರಿಯಲ್ಲಿ ನಡೆದ ಮೊದಲ ದಾಳಿಗೆ ಶಸ್ತಾಸ್ತ್ರ ಒದಗಿಸಿ ಆರೋಪದಲ್ಲಿ ಮೊಹಮ್ಮದ್ ಸೊಹೈಲ್ ಅಲಿಯಾಸ್ ಚಿಯಾ (24) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿ ಫೆಬ್ರವರಿಯಲ್ಲಿ ಆರಿಫ್ ವಿರುದ್ಧ ನಡೆದ ಮೊದಲ ದಾಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾರೆ, ಆದರೆ ಅದು ವಿಫಲವಾಗಿತ್ತು.
ಆರಿಫ್ ಹತ್ಯೆ ಪ್ರಕರಣದಲ್ಲಿ ಕೆಕೋಕಾ ಕಾಯ್ದೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯಲ್ಲಿ 15 ಆರೋಪಿಗಳ ಪಾತ್ರ ಬಹಿರಂಗವಾಗಿದ್ದು, ಅವರಲ್ಲಿ 10 ಜನರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆ ಮತ್ತು ತನಿಖೆಗಾಗಿ ಪೆÇಲೀಸ್ ಕಸ್ಟಡಿಗೆ ತೆಗೆದುಕೊಂಡು ಈಗ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಯಲ್ಲಿ 5 ಹೆಚ್ಚುವರಿ ಆರೋಪಿಗಳ ಪಾತ್ರ ಪತ್ತೆಯಾಗಿದ್ದು, ಅವರಲ್ಲಿ ಕೆಲವರು ವಿದೇಶದಲ್ಲಿದ್ದಾರೆ. ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ನ್ಯಾಯಾಲಯದ ಮುಂದೆ ಕೆಕೋಕಾ ಅರ್ಜಿ ಸಲ್ಲಿಕೆ ಆದೇಶಗಳನ್ನು ಸಲ್ಲಿಸಿದ ನಂತರ, ಪ್ರಕರಣವನ್ನು ವಿಚಾರಣೆಗಾಗಿ ಮೈಸೂರು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.











0 comments:
Post a Comment