ಬಂಟ್ವಾಳ, ಎಪ್ರಿಲ್ 06, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಪಿಂಟೋ ಕಾಂಪ್ಲೆಕ್ಸ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಆಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ ಸಿ ರೋಡು-ಕೈಕಂಬ ನಿವಾಸಿ ಶಿವರಾಮ ಆಚಾರ್ಯ (67) ಅವರಿಗೆ ಸೇರಿದ ದ್ವಿಚಕ್ರ ವಾಹನ ಕಳವಾಗಿದ್ದು, ಇವರು ಮಾರ್ಚ್ 30 ರಂದು ಸಂಜೆ 6.30ರ ವೇಳೆಗೆ ತನ್ನ ಕೆಎ19 ಇಕೆ0275 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಬಿ ಸಿ ರೋಡಿನ ಪಿಂಟೋ ಕಾಂಪ್ಲೆಕ್ಸ್ ಎದುರುಗಡೆ ನಿಲ್ಲಿಸಿ ಸಮೀಪದಲ್ಲಿ ನಡೆಯುತ್ತಿದ್ದ ಕಲ್ಲುರ್ಟಿ ದೈವದ ಅಗೇಲು ಸೇವೆಯ ಪ್ರಸಾದ ಸ್ವೀಕರಿಸಲು ಹೋಗಿದ್ದರು. ಬಳಿಕ ಸಂಜೆ ಸುಮಾರು 7 ಗಂಟೆಯ ವೇಳೆಗೆ ವಾಪಾಸು ಬಂದು ನೋಡಿದಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿದೆ. ಕಳವಾಗಿರುವ ದ್ವಿಚಕ್ರ ವಾಹನದ ಮೌಲ್ಯ 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿವರಾಮ ಆಚಾರ್ಯ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment