ಬಂಟ್ವಾಳ, ಎಪ್ರಿಲ್ 24, 2026 (ಕರಾವಳಿ ಟೈಮ್ಸ್) : ಮಾತೆ ಮಾತೆ ಎನ್ನುತ್ತಲೇ ಮಹಿಳೆಗೆ ಸದಾ ಅನ್ಯಾಯವನ್ನೇ ಮಾಡುತ್ತಾ ಬಂದಿರುವ ಬಿಜೆಪಿ ಇದೀಗ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಮೂಲಕ ಜನರಿಗೆ ಮುಂಡಾಮೋಚಲು ಹೊರಟಿದದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ಗ್ರಾಮೀಣ) ಹಾಗೂ ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೆಸ್ ಮತ್ತು ಬಂಟ್ವಾಳ ಮಹಿಳಾ ಕಾಂಗ್ರೆಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಮಾರ್ಗದರ್ಶನದಲ್ಲಿ 2023ರ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತರದೆ ದೇಶದ ಮಹಿಳೆಯರಿಗೆ ಸುಳ್ಳು ಹೇಳಿ ದ್ರೋಹ ಮಾಡಿದ ಬಿಜೆಪಿ ವಿರುದ್ದ ಎಪ್ರಿಲ್ 24 ರಂದು ಸಂಜೆ ಬಿ ಸಿ ರೋಡು ಜಂಕ್ಷನ್ನಿನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನಾತ್ಮಕ ಯಾವುದೇ ಹುದ್ದೆಗಳನ್ನು ಮಹಿಳೆಯರಿಗೆ ನೀಡದ ಬಿಜೆಪಿ ವಿವಿಧ ರಾಜ್ಯಗಳ ಚುನಾವಣಾ ಸಂದರ್ಭ ವಿವಿಧ ನಾಟಕಗಳನ್ನಾಡಿ ಮಹಿಳೆಯರನ್ನು ಮಂಗ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಪ್ರಧಾನಿ, ಮುಖ್ಯಮಂತ್ರಿ ಸಹಿತ ವಿವಿಧ ಉನ್ನತ ಹುದ್ದೆಗಳನ್ನು ನೀಡಿ ಸದಾ ಗೌರವಿಸಿದೆ. ಆದರೆ ಬಿಜೆಪಿ ಅಥವಾ ಆರೆಸ್ಸೆಸ್ ಮಹಿಳೆಯರಿಗೆ ಅದ್ಯಾವ ಸ್ಥಾನಮಾನಗಳನ್ನು ನೀಡಿದೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಸವಾಲು ಹಾಕಿದ ರಮಾನಾಥ ರೈ ಅವರು ಬಿಜೆಪಿ ಪಕ್ಷ ಹಾಗೂ ಸರಕಾರಗಳು ವೈಫಲ್ಯಗಳನ್ನು ಅನುಭವಿಸಿದ ಸಂದರ್ಭ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿ ನಾಟಕ ಆಡುತ್ತಿದೆ ಎಂದು ಕುಟುಕಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ಗ್ರಾಮೀಣ) ಅಧ್ಯಕ್ಷೆ ಉಷಾ ಅಂಚನ್, ಪಕ್ಷ ಪ್ರಮುಖರಾದ ಆರ್ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಎಂ ಎಸ್ ಮುಹಮ್ಮದ್, ಎ ಬಿ ಅಬ್ದುಲ್ಲಾ, ಬೇಬಿ ಕುಂದರ್, ಪದ್ಮರಾಜ್ ಪೂಜಾರಿ, ಜೋಸ್ಪಿನ್ ಡಿ ಸೋಜ, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೊ, ಐಡಾ ಸುರೇಶ್, ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಜಯಂತಿ ಪೂಜಾರಿ, ಸುದರ್ಶನ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಅಮಿತಾ ಭಂಡಾರಿ, ಅಸ್ಮಾ ಹಸೈನಾರ್, ಧನಲಕ್ಷ್ಮೀ ಸಿ ಬಂಗೇರ, ಯೂಸುಫ್ ಕರಂದಾಡಿ, ಸಿದ್ದೀಕ್ ಸರವು, ಜೆಸಿಂತಾ ಡಿಸೋಜ, ಕುಮಾರಿ ಅಪ್ಪಿ, ಶೈಲಜಾ ರಾಜೇಶ್, ಶಬನಾ ಕಾವಳಕಟ್ಟೆ, ಸಾರಿಕಾ ಪೂಜಾರಿ, ಮಂಜುಳಾ ಕುಶಲ ಪೆರಾಜೆ, ಝೀನತ್ ಬೆಳ್ತಂಗಡಿ, ಪಿ ಬಿ ವರ್ಗೀಸ್, ಮೋಹನ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಶೋಭಾ ಶೆಟ್ಟಿ, ಸಿರಾಜ್ ಮದಕ, ಸಿದ್ದೀಕ್ ಸರವು, ಮಹಮ್ಮದ್ ನಂದಾವರ, ಸುನಿತಾ ಪದ್ಮನಾಭ, ಮಂಜುಳಾ ಪೆರಾಜೆ, ಪುಷ್ಪಾವತಿ, ಫೌಝಿಯಾ, ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

















0 comments:
Post a Comment