ಶುಭ ವಿವಾಹ : ಫಾತಿಮಾ ಝಕಿಯ್ಯಾ-ಮುಹಮ್ಮದ್ ಇರ್ಶಾದ್ ::: ಮುಹಮ್ಮದ್ ಇರ್ಫಾನ್-ಫಾತಿಮಾ ಫರ್ವೀನ್ - Karavali Times ಶುಭ ವಿವಾಹ : ಫಾತಿಮಾ ಝಕಿಯ್ಯಾ-ಮುಹಮ್ಮದ್ ಇರ್ಶಾದ್ ::: ಮುಹಮ್ಮದ್ ಇರ್ಫಾನ್-ಫಾತಿಮಾ ಫರ್ವೀನ್ - Karavali Times

728x90

27 April 2026

ಶುಭ ವಿವಾಹ : ಫಾತಿಮಾ ಝಕಿಯ್ಯಾ-ಮುಹಮ್ಮದ್ ಇರ್ಶಾದ್ ::: ಮುಹಮ್ಮದ್ ಇರ್ಫಾನ್-ಫಾತಿಮಾ ಫರ್ವೀನ್




 ಬಂಟ್ವಾಳ, ಎಪ್ರಿಲ್ 27, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಪಿ ಯಾಕೂಬ್ ಅವರ ಪುತ್ರಿ ಫಾತಿಮಾ ಝಕಿಯ್ಯಾ ಎಂಬ ವಧುವಿನ ವಿವಾಹವು ಪಾಣೆಮಂಗಳೂರು-ನೆಹರುನಗರ ನಿವಾಸಿ ಅಬ್ಬಾಸ್ ಪಿ ಜೆ ಅವರ ಪುತ್ರ ಮುಹಮ್ಮದ್ ಇರ್ಶಾದ್ ಎಂಬ ವರನೊಂದಿಗೆ ಹಾಗೂ ಅಬ್ಬಾಸ್ ಪಿ ಜೆ ಅವರ ಇನ್ನೋರ್ವ ಪುತ್ರ ಮುಹಮ್ಮದ್ ಇರ್ಫಾನ್ ಎಂಬ ವರನ ವಿವಾಹವು ಬೊಳ್ಳಾಯಿ-ಜಾಡಕೋಡಿ ನಿವಾಸಿ ಇಸುಬು ಅವರ ಪುತ್ರಿ ಫಾತಿಮಾ ಜುವೈರಿಯಾ ಎಂಬ ವಧುವಿನೊಂದಿಗೆ ಪಾಣೆಮಂಗಳೂರು-ಅಕ್ಕರಂಗಡಿಯ ಎಚ್.ಎಚ್. ಈವೆಂಟ್ಸ್ ಆಂಡ್ ಕನ್ವೆನ್ಷನ್ ಸಭಾಂಗಣದಲ್ಲಿ ಎಪ್ರಿಲ್ 27 ರಂದು ಸೋಮವಾರ ನೆರವೇರಿತು.

ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿಯಲ್ಲಿ ನಡೆದ ನಿಕಾಹ್ ಕಾರ್ಯವನ್ನು ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಝುಬೈರ್ ದಾರಿಮಿ ಹಾಗೂ ನೆಹರುನಗರ ಬದ್ರಿಯಾ ಜುಮಾ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ಅವರುಗಳು ನೆರವೇರಿಸಿದರು. ವಿವಾಹ ಕಾರ್ಯಕ್ರಮದಲ್ಲಿ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್, ತುಂಬೆ ಜುಮಾ ಮಸೀದಿ ಖತೀಬ್ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸಹಿತ ಹಲವು ಮಂದಿ ಗಣ್ಯರು, ಕುಟುಂಬ ಬಂಧುಗಳು ಹಾಗೂ ಹಿತೈಷಿಗಳು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ : ಫಾತಿಮಾ ಝಕಿಯ್ಯಾ-ಮುಹಮ್ಮದ್ ಇರ್ಶಾದ್ ::: ಮುಹಮ್ಮದ್ ಇರ್ಫಾನ್-ಫಾತಿಮಾ ಫರ್ವೀನ್ Rating: 5 Reviewed By: karavali Times
Scroll to Top