ಮಂಗಳೂರು, ಮೇ 21, 2026 (ಕರಾವಳಿ ಟೈಮ್ಸ್) : ಕರಾವಳಿ ಅಭಿವೃದ್ಧಿ ಮಂಡಳಿಯ ನಿಯೋಗ ತಮಿಳುನಾಡಿನ ಶ್ರೀ ಎಂ ಎಸ್ ಸ್ವಾಮೀನಥನ್ ಸಂಶೋಧನ ಕೇಂದ್ರ ಹಾಗೂ ವಿವಿಧ ಪ್ರದೇಶಗಳಲ್ಲಿ ಮ್ಯಾಂಗ್ರೋವ್ ತಳಿಗಳ ಬಗ್ಗೆ ಅಧ್ಯಯನ ಪ್ರವಾಸದಲ್ಲಿದ್ದು, ಮೇ 21 ರಂದು ಶ್ರೀಪೆರಂಬದೂರುನಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ ಎ ಗಫೂರ್ ಹಾಗೂ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಅಧಿಕಾರಿಗಳಾದ ಮಂಜುನಾಥ್ ಶೆಟ್ಟಿ ಹಾಗೂ ಇತರರು ಜೊತೆಗಿದ್ದರು.












0 comments:
Post a Comment