ಬಂಟ್ವಾಳ, ಮೇ 18, 2026 (ಕರಾವಳಿ ಟೈಮ್ಸ್) : ಸಿಡಿಲು ಬಡಿದು ಹಾನಿಗೊಳಗಾದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಸೋಮವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ದೇವರ ಗರ್ಭಗುಡಿಯ ಪ್ರಾಕಾರಕ್ಕೆ ತೀವ್ರ ಸ್ವರೂಪದಲ್ಲಿ ಹಾನಿಯಾಗಿದ್ದು, ತಹಶಿಲ್ದಾರ್ ಮಂಜುನಾಥ್ ಅವರ ಜೊತೆಗೆ ದೇವಸ್ಥಾನಕ್ಕೆ ಆಗಮಿಸಿದ ಶಾಸಕರು ಸಿಡಿಲಿನಿಂದ ಹಾನಿಯಾಗಿರುವ ದೇವರ ಗರ್ಭಗುಡಿಯ ಪ್ರಾಕಾರವನ್ನು ಶೀಘ್ರವಾಗಿ ಸರಿಪಡಿಸುವ ನಿಟ್ಟಿನಲ್ಲಿ ನಷ್ಟದ ವಿವರವನ್ನು ನೀಡಬೇಕು ಮತ್ತು ತುರ್ತಾಗಿ ಆಗಬೇಕಿರುವ ಕಾರ್ಯಕ್ಕೆ ಕ್ರಮಕೈಗೊಳ್ಳಬೇಕು ಎಂದರು.
ಜೊತೆಗೆ ದೇವಸ್ಥಾನದ ಗರ್ಭಗುಡಿಯ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದುವರಿಯಲು ಗ್ರಾಮಸ್ಥರ ಕೂಡುವಿಕೆಯಲ್ಲಿ ಸ್ಥಳದಲ್ಲಿ ಪ್ರಶ್ನಾಚಿಂತನೆ ನಡೆಸುವುದರ ಬಗ್ಗೆ ಚರ್ಚಿಸಿದರು.
ದೇವಸ್ಥಾನದ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲು ಗುತ್ತು, ಟ್ರಸ್ಟಿಗಳಾದ ಶಿವರಾಮ ಶೆಟ್ಟಿ, ಲಾವಣ್ಯ ಬಲ್ಲಾಳ್, ಶಿವಪ್ಪ ಪೂಜಾರಿ, ಜಯನಾಯ್ಕ್, ಲಿಂಗಪ್ಪ ಪೂಜಾರಿ, ಪ್ರಮುಖರಾದ ಸುದರ್ಶನ ಬಜ, ಪ್ರಕಾಶ್ ಅಂಚನ್, ಶಾಂತಪ್ಪ ಪೂಜಾರಿ, ಧನಂಜಯ ಶೆಟ್ಟಿ ಸರಪಾಡಿ, ಶಶಿಕಾಂತ್ ಶೆಟ್ಟಿ ಆರ್ಮುಡಿ, ರಾಮಕೃಷ್ಣ ಮಯ್ಯ, ಸುರೇಖಾ ಹೆಗ್ಡೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಜಯರಾಮ ಅಡಪ ದೆಚ್ಚಾರು, ತಿಲಕ್ ಬಂಗೇರ, ಮೋನಪ್ಪ ಪೂಜಾರಿ, ಸಂಜೀವ ಪೂಜಾರಿ, ವಸಂತ ದೆಚ್ಚಾರು, ಆನಂದ ಪೂಜಾರಿ ಅಲ್ಲಂಗಾರು, ಸಂತೋಷ್ ಕುಲಾಲ್, ಸುಜಿತ್ ಕಡಮಾಜೆ ಮೊದಲಾದವರು ಜೊತೆಗಿದ್ದರು.














0 comments:
Post a Comment