ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಪುರೋಹಿತ ಸಂಘದಿಂದ ಸಂಧ್ಯಾವಂದನೆ ತರಬೇತಿ ಶಿಬಿರಕ್ಕೆ ಚಾಲನೆ - Karavali Times ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಪುರೋಹಿತ ಸಂಘದಿಂದ ಸಂಧ್ಯಾವಂದನೆ ತರಬೇತಿ ಶಿಬಿರಕ್ಕೆ ಚಾಲನೆ - Karavali Times

728x90

18 May 2026

ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಪುರೋಹಿತ ಸಂಘದಿಂದ ಸಂಧ್ಯಾವಂದನೆ ತರಬೇತಿ ಶಿಬಿರಕ್ಕೆ ಚಾಲನೆ

ಬಂಟ್ವಾಳ, ಮೇ 18, 2026 (ಕರಾವಳಿ ಟೈಮ್ಸ್) : ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಪುರೋಹಿತರ ಸಂಘ ದ ಕ ಹಾಗೂ ಕೂಡಿಬೈಲು ಶ್ರೀ ಮಹಾದೇವಿ ಮಹಮ್ಮಾಯಿ ದೇವಸ್ಥಾನದ ಆಶ್ರಯದಲ್ಲಿ ಸಂಧ್ಯಾವಂದನೆ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ದೊರೆಯಿತು.

ಕೂಡಿಬೈಲು ಶ್ರೀ ಮಹಾದೇವಿ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ಮೇ 18 ರಿಂದ 24 ರವರೆಗೆ ನಡೆಯಲಿರುವ ಈ ಶಿಬಿರವನ್ನು ಪುರೋಹಿತರ ಸಂಘದ ಅಧ್ಯಕ್ಷ ಚಂದ್ರಹಾಸ ಭಟ್ ಇರುವೈಲು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೂಡಿಬೈಲು ಶ್ರೀನಿವಾಸ ಶೆಣೈ, ಶಿವರಾಯ ನಾಯಕ್, ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಪ್ರಭು, ಪ್ರಗತಿಪರ ಕೃಷಿಕ ಶಾಂತಾರಾಮ ನಾಯಕ ಕಡಂಬು, ಪುರೋಹಿತರ ಸಂಘದ ಕಾರ್ಯದರ್ಶಿ ಇಡ್ಯ ಪ್ರಭಾಕರ ಭಟ್, ಜಯರಾಮ ಭಟ್ ಹಾಗೂ ಹರೀಶ್ ಭಟ್ ಉಪಸ್ಥಿತರಿದ್ದರು.

ಏಳು ದಿನಗಳ ಕಾಲ ನಡೆಯುವ ವಸತಿ ಸಹಿತ ಶಿಬಿರದಲ್ಲಿ 25 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು, ಸಂಧ್ಯಾವಂದನೆ, ಭಸ್ಮಧಾರಣೆ ವಿಧಿ, ಭೋಜನ ವಿಧಿ ಹಾಗೂ ನಿತ್ಯಪಠಣೀಯ ಸ್ತೋತ್ರಗಳ ಕುರಿತು ತರಬೇತಿ ನೀಡಲಾಗುತ್ತಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಪುರೋಹಿತ ಸಂಘದಿಂದ ಸಂಧ್ಯಾವಂದನೆ ತರಬೇತಿ ಶಿಬಿರಕ್ಕೆ ಚಾಲನೆ Rating: 5 Reviewed By: karavali Times
Scroll to Top