ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ಕಲ್ಲಡ್ಕದಲ್ಲಿ ತಳ್ಳು ಗಾಡಿ ವ್ಯಾಪಾರ ಮಾಡುತ್ತಿದ್ದ ಹುಸೈನ್ ಎಂಬವರ ಅಂಗಡಿಯ ಸಾಮಾನು ಬಿಸಾಡಿ ಜೀವಬೆದರಿಕೆ ಒಡ್ಡಿರುವ ಘಟನೆ ಜೂನ್ 28 ರಂದು ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಚಯದ ಜುನೈದ್ ಎಂಬಾತನೇ ಆರೋಪಿ ಎಂದು ಗುರುತಿಸಲಾಗಿದೆ. ಗೋಳ್ತಮಜಲು ನಿವಾಸಿ ಹುಸೈನ್ ಅವರು ಸಂಸಾರ ಸಮೇತ ಕಲ್ಲಡ್ಕದಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ಜೀವನ ಸಾಗಿಸಿಕೊಂಡಿರುವುದಾಗಿದೆ. ಎಂದಿನಂತೆ ಜೂನ್ 28 ರಂದು ಸಂಜೆ ಸಮಯ ಕೆಲಸ ಮಾಡಿಕೊಂಡಿರುವಾಗ ಆರೋಪಿ ಜುನೈದ್ ಅಂಗಡಿಗೆ ಬಂದು ಅಂಗಡಿಯಲ್ಲಿನ ಸಾಮಾನುಗಳನ್ನು ಎತ್ತಿ ನೆಲಕ್ಕೆ ಬಿಸಾಕಿದ್ದಲ್ಲೆ ಹುಸೈನ್ ಅವರನ್ನು ತಡೆದು ನಿಲ್ಲಿಸಿ ಕೈಯಿಂದ ನೂಕಿರುವುದಾಗಿದೆ. ಈ ಬಗ್ಗೆ ಆರೋಪಿಯಲ್ಲಿ ಯಾಕೆ ಹೀಗೆ ಮಾಡುತ್ತೀಯ? ಎಂದು ಕೇಳಿದಾಗ ಆರೋಪಿ ಜುನೈದ್ ಅಂಗಡಿ ಮಾಲಕ ಹುಸೈನ್ ಅವರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಹುಸೈನ್ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.















0 comments:
Post a Comment