ಮಂಗಳೂರು, ಜೂನ್ 24, 2026 (ಕರಾವಳಿ ಟೈಮ್ಸ್) : ಮಂಗಳೂರು ಎಸ್.ಸಿ.ಎಸ್ ಆಸ್ಪತ್ರೆಯ ಮಂಗಳೂರಿನ ಪಾಂಡೇಶ್ವರದಲ್ಲಿರುವ ಅಗ್ನಿಶಾಮಕ ಕಚೇರಿಯಲ್ಲಿನ ಅಗ್ನಿಶಾಮಕ ಅಧಿಕಾರಿಗಳು ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್.ಡಿ.ಆರ್.ಎಫ್) ಸಿಬ್ಬಂದಿಗಾಗಿ ಸಮಗ್ರ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತು.
ಮುಂಚಿತ ಆರೋಗ್ಯ ರಕ್ಷಣೆ, ರೋಗಗಳ ಆರಂಭಿಕ ಹಂತದಲ್ಲೇ ಪತ್ತೆ ಹಾಗೂ ಮುಂಚೂಣಿ ತುರ್ತು ಸೇವಾ ಸಿಬ್ಬಂದಿಯ ಸಮಗ್ರ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರವನ್ನು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೊಹಮ್ಮದ್ ಜುಲ್ಫಿಕರ್ ನವಾಜ್ ಉದ್ಘಾಟಿಸಿದರು. ಈ ಸಂದರ್ಭ ಎಸ್.ಸಿ.ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಾಲಿನಿ ಎಸ್. ರಾವ್ ಹಾಗೂ ಎಸ್.ಸಿ.ಎಸ್ ಆಸ್ಪತ್ರೆಯ ಜನರಲ್ ಮ್ಯಾನೇಜರ್ ರಾಘವೇಂದ್ರ ಸಿಂಗ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದಲ್ಲಿನ ಸಕ್ಕರೆ ಮಟ್ಟ ಪರೀಕ್ಷೆ, ರಕ್ತದೊತ್ತಡ ಹಾಗೂ ಇತರ ಪ್ರಮುಖ ಆರೋಗ್ಯ ಸೂಚಕಗಳ ಪರಿಶೀಲನೆ, ದೇಹದ ತೂಕ-ಎತ್ತರ ಅನುಪಾತ ಮೌಲ್ಯಮಾಪನ, ಇಸಿಜಿ ಪರೀಕ್ಷೆ,
ಚಲನಶೀಲತೆ, ಸ್ನಾಯು-ಮೂಳೆ ಸಮಸ್ಯೆಗಳು ಹಾಗೂ ವೃತ್ತಿಪರ ಒತ್ತಡದಿಂದ ಉಂಟಾಗುವ ತೊಂದರೆಗಳ ಮೌಲ್ಯಮಾಪನಕ್ಕಾಗಿ ಫಿಸಿಯೋಥೆರಪಿ ಸಲಹೆ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ವೈಯಕ್ತಿಕ ಆಹಾರ ಮತ್ತು ಪೌಷ್ಟಿಕಾಂಶ ಸಲಹೆಗಳನ್ನು ನೀಡಲಾಯಿತು.


















0 comments:
Post a Comment