ಬಂಟ್ವಾಳ, ಜೂನ್ 08, 2026 (ಕರಾವಳಿ ಟೈಮ್ಸ್) : ಅಕ್ರಮ ಗೋಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜಿಪಮೂಡ ಗ್ರಾಮದ ಕೊಳಕೆ-ಪಂಜಾಜೆ ಎಂಬಲ್ಲಿ ಆರೋಪಿಗಳ ಮನೆ, ಕೊಟ್ಟಿಗೆ ಸೇರಿದಂತೆ ಕೃತ್ಯ ನಡೆದ ಸ್ಥಳವನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಜಫ್ತಿ ಮಾಡಿದ್ದಾರೆ.
ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 68/2026, ಕಲಂ 4,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳವಾದ ಸಜಿಪಮೂಡ ಗ್ರಾಮದ ಕೊಳಕೆ ಪಂಜಾಜೆ ಎಂಬಲ್ಲಿ ಪ್ರಕರಣದ ಆರೋಪಿ ಮುಸ್ತಫಾ ಬಾಬ್ತು ಮನೆ ಹಾಗೂ ದನದ ಕೊಟ್ಟಿಗೆಗಳನ್ನು ಕಲಂ 8(1) ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020’ ರಂತೆ ಜಪ್ತಿ ಮಾಡಿರುವ ಪೊಲೀಸರು ಮುಂದಿನ ಕ್ರಮಕ್ಕಾಗಿ ಮಂಗಳೂರು ಉಪ ವಿಭಾಗೀಯ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.













0 comments:
Post a Comment