ಹಳೆಯಂಗಡಿ : ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ - Karavali Times ಹಳೆಯಂಗಡಿ : ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ - Karavali Times

728x90

30 June 2026

ಹಳೆಯಂಗಡಿ : ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು, ಜೂನ್ 30, 2026 (ಕರಾವಳಿ ಟೈಮ್ಸ್) : ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಾರಿಯ ಪಿಯುಸಿ ಹಾಗು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ತೈತೋಟ ಚಾರಿಟೇಬಲ್ ಟ್ರಸ್ಟ್ ಬೊಳ್ಳೂರು ಇದರ ಸಹಭಾಗಿತ್ವದಲ್ಲಿ ಪೆÇ್ರೀತ್ಸಾಹಧನ ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ಇತ್ತೀಚಿಗೆ ಇಂದಿರಾನಗರದ ರಿಲಯನ್ಸ್ ಭವನದಲ್ಲಿ ನಡೆಯಿತು.

ರಿಲಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ ಎ ಇಕ್ಬಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಉದ್ಘಾಟಿಸಿದರು. 

ತೈತೋಟ ಚಾರಿಟೇಬಲ್ ಟ್ರಸ್ಟ್ ಇದರ ಬದ್ರುದ್ದೀನ್, ಉದ್ಯಮಿ ಶರೀಫ್ ಸೌದಿ ಅರೇಬಿಯಾ, ರಿಲಯನ್ಸ್ ಸೌದಿ ಘಟಕದ ಅಧ್ಯಕ್ಷ ಜಲೀಲ್ ನವರಂಗ್, ಮಾಜಿ ಅಧ್ಯಕ್ಷ ಕಲಂದರ್ ಕೌಶಿಕ್, ಅಯಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಇದೇ ವೇಳೆ ಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಟ್ವೆಕಾಂಡೋ ಮಾರ್ಷಲ್ ಆರ್ಟ್ಸ್ ತರಗತಿಯ ಉದ್ಘಾಟನೆ ನಡೆಯಿತು. ಕರಾಟೆ ತರೆಬೇತುದಾರ ಆಸೀಫ್ ಕಿನ್ಯ ಅವರು ಕರಾಟೆ ಪ್ರದರ್ಶನ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಇಲ್ಯಾಸ್ ಅಲ್ ಅಕ್ಸ, ಕಾರ್ಯದರ್ಶಿ ಮುಬಾರಕ್ ಬೊಳ್ಳೂರು, ಲೆಕ್ಕ ಪರಿಶೋಧಕ ಅಕ್ಬರ್ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಸಲಹೆಗಾರ ಆರಿಶ್ ನವರಂಗ್ ವಂದಿಸಿ, ಪ್ರಧಾನ ಕಾರ್ಯದರ್ಶಿ ಮೊಯಿದಿನ್ ಬಿ ಎಂ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಹಳೆಯಂಗಡಿ : ರಿಲಯನ್ಸ್ ಎಸೋಸಿಯೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ Rating: 5 Reviewed By: karavali Times
Scroll to Top