ಜೂನ್ 7 ರಂದು (ನಾಳೆ) ಆರೋಗ್ಯ ಸಚಿವ ಯು.ಟಿ. ಖಾದರ್ ಜಿಲ್ಲೆಗೆ ಪ್ರಥಮ ಭೇಟಿ : ಕ್ಷೇತ್ರ ಹಾಗೂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ - Karavali Times ಜೂನ್ 7 ರಂದು (ನಾಳೆ) ಆರೋಗ್ಯ ಸಚಿವ ಯು.ಟಿ. ಖಾದರ್ ಜಿಲ್ಲೆಗೆ ಪ್ರಥಮ ಭೇಟಿ : ಕ್ಷೇತ್ರ ಹಾಗೂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ - Karavali Times

728x90

6 June 2026

ಜೂನ್ 7 ರಂದು (ನಾಳೆ) ಆರೋಗ್ಯ ಸಚಿವ ಯು.ಟಿ. ಖಾದರ್ ಜಿಲ್ಲೆಗೆ ಪ್ರಥಮ ಭೇಟಿ : ಕ್ಷೇತ್ರ ಹಾಗೂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಮಂಗಳೂರು, ಜೂನ್ 06, 2026 (ಕರಾವಳಿ ಟೈಮ್ಸ್) : ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಚಿವ ಡಾ ಯು.ಟಿ ಖಾದರ್ ಅವರು ಮೊದಲ ಬಾರಿಗೆ ಜೂನ್ 7 ರಂದು ಭಾನುವಾರ ಜಿಲ್ಲೆಗೆ ಆಗಮಿಸಲಿದ್ದು, ಕ್ಷೇತ್ರದ ಹಾಗೂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.  

ಭಾನುವಾರ ಬೆಳಿಗ್ಗೆ 8.30ಕ್ಕೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಭೇಟಿ, 9.30ಕ್ಕೆ ಉಳ್ಳಾಲ ಶ್ರೀ ಚೀರುಂಭ  ಭಗವತಿ ಕ್ಷೇತ್ರಕ್ಕೆ ಭೇಟಿ, 10 ಗಂಟೆಗೆ ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಚರ್ಚ್ ಭೇಟಿ, ಮಧ್ಯಾಹ್ನ 12ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಭೇಟಿ, ಅಪರಾಹ್ನ 2 ಗಂಟೆಗೆ ಬಂಟ್ವಾಳದಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ ಜನಾರ್ಧನ ಪೂಜಾರಿ ಅವರ ಮನೆಗೆ ಭೇಟಿ, 3.30ಕ್ಕೆ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ, ಸಂಜೆ 5.30ಕ್ಕೆ ಕೊಡಿಯಾಲ್ ಬೈಲ್ ಬಿಷಪ್ ಹೌಸಿನಲ್ಲಿ ಬಿಷಪ್ ಅವರ ಭೇಟಿ, 6.30ಕ್ಕೆ ಅಂಬ್ಲಮೊಗರು ಕುಂಡೂರು ಜುಮಾ ಮಸೀದಿಯ ಸ್ವಾಗತ ದ್ವಾರ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಭಾಗವಹಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜೂನ್ 7 ರಂದು (ನಾಳೆ) ಆರೋಗ್ಯ ಸಚಿವ ಯು.ಟಿ. ಖಾದರ್ ಜಿಲ್ಲೆಗೆ ಪ್ರಥಮ ಭೇಟಿ : ಕ್ಷೇತ್ರ ಹಾಗೂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ Rating: 5 Reviewed By: karavali Times
Scroll to Top