ಪುತ್ತೂರು, ಜೂನ್ 22, 2026 (ಕರಾವಳಿ ಟೈಮ್ಸ್) : ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಮತ್ತು ಪುತ್ತೂರು ಉಪ ವಿಭಾಗದ ವತಿಯಿಂದ “ಫಿಟ್ ಇಂಡಿಯಾ-ಮಾದಕ ದ್ರವ್ಯ ಮುಕ್ತ ಮ್ಯಾರಥಾನ್ 5ಕೆ” ಕಾರ್ಯಕ್ರಮಕ್ಕೆ ಜೂನ್ 26 ರಂದು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಚಾಲನೆ ನೀಡಲಾಗುವುದು.
ಈ ಜಾಗೃತಿ ಓಟವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಪ್ರಾರಂಭವಾಗಿ, ದರ್ಬೆ ವೃತ್ತ ಮತ್ತು ಕ್ಯಾಂಪೆÇ್ಕೀ ಚಾಕೊಲೇಟ್ ಫ್ಯಾಕ್ಟರಿ ಮೂಲಕ ಸಾಗಿ, ಪುನಃ ದೇವಸ್ಥಾನದ ಮೈದಾನಕ್ಕೆ ಬಂದು ಮುಕ್ತಾಯಗೊಳ್ಳಲಿದೆ. ಈ ಮ್ಯಾರಥಾನ್‍ನಲ್ಲಿ ಭಾಗವಹಿಸಲು ಎಲ್ಲಾ ಮಹಿಳೆಯರು ಹಾಗೂ ಪುರುಷರಿಗೆ ಉಚಿತ ಪ್ರವೇಶವಿರುತ್ತದೆ. ಆಸಕ್ತರು ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ಸಂಬಂಧಪಟ್ಟ ಪೆÇಲೀಸ್ ಠಾಣೆಗಳಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಸಾರ್ವಜನಿಕರ ಅನುಕೂಲಕ್ಕಾಗಿ ಆನ್ ಲೈನ್ ನೋಂದಣಿ ಲಿಂಕ್ ಅನ್ನು ಕೂಡ ಒದಗಿಸಲಾಗಿದ್ದು, ಈ ಕೆಳಗಿನ ಲಿಂಕ್ ಬಳಸಿ ನೋಂದಾಯಿಸಿಕೊಳ್ಳಬಹುದು : https://forms.gle/3UKZUXEmnTpws7qK8
ನೋಂದಣಿಗೆ ಕೊನೆಯ ದಿನಾಂಕ ಜೂನ್ 25 ಸಂಜೆ 6 ಗಂಟೆ. ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಮತ್ತು ಆರೋಗ್ಯವಂತ ಭಾರತಕ್ಕಾಗಿ ಹಮ್ಮಿಕೊಳ್ಳಲಾಗಿರುವ ಈ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಯುವಜನರು, ಸಂಘ ಸಂಸ್ಥೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಇಲಾಖೆ ಕರೆ ನೀಡಿದೆ.














0 comments:
Post a Comment