ಬಂಟ್ವಾಳ, ಜೂನ್ 22, 2026 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ ಸಿ ಟ್ರಸ್ಟ್. ಬಂಟ್ವಾಳ ತಾಲೂಕು ಸರಪಡಿ ವಲಯ ಮತ್ತು ಕುಟ್ಟಿಕಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವು ಶಾಲಾ ವಠಾರದಲ್ಲಿ ಜೂನ್ 22 ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಪುರುಷೋತ್ತಮ ಅವರು ಮಾತನಾಡಿ, ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನದಂದು ಒಂದೊಂದು ಗಿಡ ನಾಟಿ ಮಾಡಿ ಎಂದು ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ಭಾಸ್ಕರ್ ಪರಿಸರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಶಾಲಾ ಮಕ್ಕಳಿಗೆ ಪರಿಸರ ಚಿತ್ರಕಲೆ ಸ್ಪರ್ಧೆ, ಪರಿಸರದ ಪ್ರಬಂಧ ಸ್ಪರ್ಧೆ, ಪರಿಸರ ಗೀತೆ ಸ್ಪರ್ಧೆ ನಡೆಸಲಾಯಿತು. ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ದಮಯಂತಿ, ಒಕ್ಕೂಟದ ಪದಾಧಿಕಾರಿ ಪೂರ್ಣಿಮಾ, ಸೇವಾ ಪ್ರತಿನಿಧಿ ಗುಣವತಿ, ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ವಿದ್ಯಾ ಸ್ವಾಗತಿಸಿ, ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ತೇಜ ಹಾಗೂ ತಂಡ ಪ್ರಾರ್ಥನೆ ಹಾಗೂ ಪರಿಸರ ಗೀತೆ ಹಾಡಿದರು.















0 comments:
Post a Comment