ಬೆಳ್ತಂಗಡಿ, ಜೂನ್ 16, 2026 (ಕರಾವಳಿ ಟೈಮ್ಸ್) : ಪಶ್ಷಿಮ ವಲಯ ಡಿ ಸಿ ಆರ್ ಇ ಎಸ್ಪಿ ಸೈಮನ್ ಸಿ ಎ ಅವರು ಜೂನ್ 16 ರಂದು ಮಧ್ಯಾಹ್ನ, ಕೆಎ01 ಜಿ6463 ನೋಂದಣಿ ಸಂಖ್ಯೆಯ ಸರಕಾರಿ ಇನ್ನೋವಾ ವಾಹನದಲ್ಲಿ ಸಹ ಪ್ರಯಾಣಿಕರಾಗಿ ಪೊಲೀಸ್ ಇನ್ಸ್ ಪೆಕ್ಟರ್ ಕುಸುಮಾಧರ, ಸಿಬ್ಬಂದಿ ಮಂಜುನಾಥ್ ಹಾಗೂ ವಾಹನದ ಚಾಲಕರಾಗಿ ಬೈರೇಗೌಡ ಅವರ ಜೊತೆ ಚಿಕ್ಕಮಗಳೂರಿಗೆ ತೆರಳಲು ಪ್ರಯಾಣಿಸುತ್ತಿದ್ದ ವೇಳೆ ಬೆಳ್ತಂಗಡಿ ಚಾರ್ಮಾಡಿ ಗ್ರಾಮದ ಅಂಬಿಕಾನಗರ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ಮೀರಿ ರಸ್ತೆಗೆ ಮಗುಚಿ ಬಿದ್ದಿದೆ. ಅಪಘಾತದ ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಯಾರಿಗೂ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
16 June 2026
- Blogger Comments
- Facebook Comments
Subscribe to:
Post Comments (Atom)













0 comments:
Post a Comment