ಪಾಣೆಮಂಗಳೂರು : ಶಾರದಾ ಹೈಸ್ಕೂಲಿನಲ್ಲಿ ಶಾಲಾ ಸಂಸತ್ ಉದ್ಘಾಟನೆ, ಶಾಲಾ ಹಿರಿಯ ವಿದ್ಯಾರ್ಥಿನಿಯಿಂದ ಕಂಪ್ಯೂಟರ್ ಕೊಡುಗೆಯ ಘೋಷಣೆ - Karavali Times ಪಾಣೆಮಂಗಳೂರು : ಶಾರದಾ ಹೈಸ್ಕೂಲಿನಲ್ಲಿ ಶಾಲಾ ಸಂಸತ್ ಉದ್ಘಾಟನೆ, ಶಾಲಾ ಹಿರಿಯ ವಿದ್ಯಾರ್ಥಿನಿಯಿಂದ ಕಂಪ್ಯೂಟರ್ ಕೊಡುಗೆಯ ಘೋಷಣೆ - Karavali Times

728x90

24 June 2026

ಪಾಣೆಮಂಗಳೂರು : ಶಾರದಾ ಹೈಸ್ಕೂಲಿನಲ್ಲಿ ಶಾಲಾ ಸಂಸತ್ ಉದ್ಘಾಟನೆ, ಶಾಲಾ ಹಿರಿಯ ವಿದ್ಯಾರ್ಥಿನಿಯಿಂದ ಕಂಪ್ಯೂಟರ್ ಕೊಡುಗೆಯ ಘೋಷಣೆ

ಬಂಟ್ವಾಳ, ಜೂನ್ 24, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ಶಾಲಾ ಸಂಸತ್ ಉದ್ಘಾಟನೆ ಜೂನ್ 24 ರಂದು ನೆರವೇರಿತು. 

ಶಾಲಾ ಸಂಸತ್ ಉದ್ಘಾಟಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಶ್ರೀಮತಿ ಸೌಮ್ಯ ಮಾತನಾಡಿ, ನಮ್ಮ ದೇಶದ ಪ್ರಜಾಪ್ರಭುತ್ವ, ಸಂಸತ್ತಿನ ರಚನೆ  ಹಾಗೂ ಅದರಿಂದ ಪ್ರಜೆಗಳಿಗಾಗುವ ಸಾಧಕ ಬಾಧಕಗಳ  ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ವಯಸ್ಕ ಮತದಾನ ಎಂದರೇನು? ಮತದಾನವನ್ನು ಯಾವ ಹಂತದಲ್ಲಿ ಯಾರಿಗೆ ಮಾಡಬೇಕು ಎಂಬುದರ ಕುರಿತು ಭಾರತದ ಮತದಾನದ ಪಿತಾಮಹ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಘೋಷಣೆ “ಒಂದು ವೋಟಿಗೆ ಒಂದೇ ಮೌಲ್ಯ” ಅದು ಬಡವನಾಗಲೀ, ಶ್ರೀಮಂತನಾಗಲಿ, ಈ ದೇಶದ ಮತದಾನಕ್ಕೆ ಅಂತಹ ವಿಶೇಷವಾದ ಸ್ಥಾನಮಾನ ಮತ್ತು ಮೌಲ್ಯವಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನೀವು ಕೂಡ ಪ್ರಜ್ಞಾವಂತ ಮತದಾರರಾಗಿ ಒಬ್ಬ ಶ್ರೇಷ್ಠ ಮತ್ತು ಸೂಕ್ತ ನಾಯಕನನ್ನು ಆರಿಸುವುದರ ಮೂಲಕ ಈ ದೇಶದ ಪ್ರಜಾಪ್ರಭುತ್ವ ಮತ್ತು ಮತದಾನದ ಮೌಲ್ಯಗಳನ್ನು ಕಾಪಾಡಿಕೊಂಡು ಶ್ರೇಷ್ಠ ನಾಗರಿಕರಾಗಿ ಬಾಳಬೇಕೆಂದು ಕರೆ ನೀಡಿದರು. 

ನಾವು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಕಂಪ್ಯೂಟರ್ ಅಥವಾ ಡಿಜಿಟಲ್ ಶಿಕ್ಷಣ ಇರಲಿಲ್ಲ. ಪ್ರಸ್ತುತ ಡಿಜಿಟಲ್ ಶಿಕ್ಷಣಕ್ಕೆ ಪೂರಕವಾಗಿ ಮತ್ತು ಮಕ್ಕಳ ಕಲಿಕೆಗೆ ಪೂರಕವಾಗಿ ನನ್ನ ಸ್ವಂತ ವತಿಯಿಂದ ನಾನು ಕಲಿತ ಶಾಲೆಗೆ ಹಿರಿಯ ವಿದ್ಯಾರ್ಥಿಯಾಗಿ ಉಚಿತವಾಗಿ ಕಂಪ್ಯೂಟರ್ ಕೊಡುಗೆ ನೀಡುವುದಾಗಿ ಘೋಷಿಸಿದರು. 

ಈ ಸಂದರ್ಭ ಪಾಣೆಮಂಗಳೂರು ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ನರೇಂದ್ರನಾಥ ಕುಡ್ವ, ಶಾಲಾ ಸಂಚಾಲಕ ಡಾ ಪಿ ವಿಶ್ವನಾಥ ನಾಯಕ್ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ್ ಸ್ವಾಗತಿಸಿ, ಶಿಕ್ಷಕ ಧನರಾಜ್ ಡಿ ಆರ್ ಪ್ರಸ್ತಾವನೆಗೈದರು. ಶಿಕ್ಷಕಿ ಶ್ರೀಮತಿ ತೇಜಸ್ವಿನಿ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ಶಿಕ್ಷಕ  ಅಜಿತ್ ಕುಮಾರ್ ವಂದಿಸಿ, ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ವೀಣಾ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಶಾರದಾ ಹೈಸ್ಕೂಲಿನಲ್ಲಿ ಶಾಲಾ ಸಂಸತ್ ಉದ್ಘಾಟನೆ, ಶಾಲಾ ಹಿರಿಯ ವಿದ್ಯಾರ್ಥಿನಿಯಿಂದ ಕಂಪ್ಯೂಟರ್ ಕೊಡುಗೆಯ ಘೋಷಣೆ Rating: 5 Reviewed By: karavali Times
Scroll to Top