ಲಾರಿಗಳ ಬ್ಯಾಟರಿ ಕಳ್ಳತನ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಕಾಸರಗೋಡು ಮೂಲದ ಇಬ್ಬರು ಖದೀಮರು ಅಂದರ್ - Karavali Times ಲಾರಿಗಳ ಬ್ಯಾಟರಿ ಕಳ್ಳತನ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಕಾಸರಗೋಡು ಮೂಲದ ಇಬ್ಬರು ಖದೀಮರು ಅಂದರ್ - Karavali Times

728x90

7 July 2026

ಲಾರಿಗಳ ಬ್ಯಾಟರಿ ಕಳ್ಳತನ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಕಾಸರಗೋಡು ಮೂಲದ ಇಬ್ಬರು ಖದೀಮರು ಅಂದರ್

ಬಂಟ್ವಾಳ, ಜುಲೈ 07, 2026 (ಕರಾವಳಿ ಟೈಮ್ಸ್) : ವಿಟ್ಲ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಮಯ ನಿಲ್ಲಿಸಿದ್ದ ಲಾರಿಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣಗಳ ತನಿಖೆ ನಡೆಸಿದ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೋಡು ಚೆರ್ಕಳ ನಿವಾಸಿ ಅಬ್ದುಲ್ ಶಮೀರ್ ಆಕ್ರ:  38/2025, 39/2026, 41/2026, 123/2026 ಹಾಗೂ  126/2026  ರಂತೆ 05 ಪ್ರಕರಣಗಳು ದಾಖಲಾಗಿರುತ್ತದೆ. ಸದ್ರಿ ಪ್ರಕರಣಗಳ ತನಿಖೆ ನಡೆಸಿದ  ವಿಟ್ಲ ಪೊಲೀಸ್ ಠಾಣಾ ಪೊಲೀಸರು  ಆರೋಪಿಗಳಾದ  ಕಾಸರಗೋಡು ಚರ್ಕಳ ನಿವಾಸಿ ಅಬ್ದುಲ್ ಶಮೀರ್ ಪಿ ಎ (50) ಹಾಗೂ ಕಾಸರಗೋಡು-ಮುಟ್ಟತೋಡಿ ನಿವಾಸಿ ಅಬ್ದುಲ್ ಮಜಿದ್ (33) ಎಂದು ಗುರುತಿಸಲಾಗಿದೆ. 

ಆರೋಪಿಗಳಿಂದ ಕಳ್ಳತನ ಮಾಡಿದ 10 ಬ್ಯಾಟರಿಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಪೊಲೀಸರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಲಾರಿಗಳ ಬ್ಯಾಟರಿ ಕಳ್ಳತನ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು : ಕಾಸರಗೋಡು ಮೂಲದ ಇಬ್ಬರು ಖದೀಮರು ಅಂದರ್ Rating: 5 Reviewed By: karavali Times
Scroll to Top