ಬಂಟ್ವಾಳ, ಜುಲೈ 23, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ 10ನೇ ಮೈಲಿಕಲ್ಲು ಎಂಬಲ್ಲಿ ವಾಶ್ ಮಾಡಿ ನಿಲ್ಲಿಸಿದ ಮಾರುತಿ ಓಮ್ನಿ ಕಾರಿಗೆ ಬೊಲೆರೋ ಜೀಪ್ ಡಿಕ್ಕಿ ಹೊಡೆದ ಘಟನೆ ಉಲೈ 22 ರಂದು ಸಂಭವಿಸಿದೆ.
ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ನಿವಾಸಿ ಸುದರ್ಶನ್ ಕುಲಾಲ್ ಅವರು ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ಪುದು ಗ್ರಾಮದ 10ನೇ ಮೈಲ್ ಕಲ್ಲು ಎಂಬಲ್ಲಿನ ಕಾರ್ ವಾಶ್ ಸರ್ವಿಸ್ ಸ್ಟೇಷನ್ ಬಳಿ ಕಾರ್ ವಾಶ್ ಮಾಡಿ ನಿಲ್ಲಿಸಿದ್ದ ಮಾರುತಿ ಒಮ್ನಿಗೆ ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಶೈಲೇಶ್ ಎಂಬವರು ಚಲಾಯಿಸಿಕೊಂಡು ಬಂದ ಬೊಲೆರೋ ಜೀಪ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಓಮ್ನಿ ಚಾಲಕ ಸುದರ್ಶನ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment