ಬಂಟ್ವಾಳದಲ್ಲಿ ಭಾರೀ ಮಳೆಗೆ ಹಲವೆಡೆ ಮನೆ, ತೋಟಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಭಾರೀ ಮಳೆಗೆ ಹಲವೆಡೆ ಮನೆ, ತೋಟಗಳಿಗೆ ಹಾನಿ - Karavali Times

728x90

4 July 2026

ಬಂಟ್ವಾಳದಲ್ಲಿ ಭಾರೀ ಮಳೆಗೆ ಹಲವೆಡೆ ಮನೆ, ತೋಟಗಳಿಗೆ ಹಾನಿ

ಬಂಟ್ವಾಳ, ಜುಲೈ 04, 2026 (ಕರಾವಳಿ ಟೈಮ್ಸ್) : ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ನಿರಂತರವಾಗಗಿ ಸುರಿಯುತ್ತಿದ್ದ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. 

ಬಾಳ್ತಿಲ ಗ್ರಾಮದ ಸುಧೆಕಾರು ನಡುಮನೆಯ ನಿವಾಸಿ ಜಯಂತಿ ಶೆಟ್ಟಿ ಕೋಂ ಕೇಶವ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ಸಿಂಟೆಕ್ಸ್ ಹಾನಿಯಾಗಿ, ಹಂಚುಗಳು ಹುಡಿಯಾಗಿದೆ. ನರಿಕೊಂಬು ಗ್ರಾಮದ ಕಲ್ಯಾಣ ಅಗ್ರಾರ ನಿವಾಸಿ ಉಮೇಶ್ ಪೂಜಾರಿ ಬಿನ್ ಗಿರಿಯಪ್ಪ ಪೂಜಾರಿ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದ ತೀವ್ರ ಹಾನಿಯಾಗಿದೆ. ಸಂಜೀವ ಪೂಜಾರಿ ಬಿನ್ ಗಿರಿಯಪ್ಪ ಪೂಜಾರಿ ಅವರ ಅಡಿಕೆ ತೋಟಕ್ಕೆ ಹಾಗೂ ವಾಸ್ತವ್ಯದ ಪಕ್ಕಾ ಮನೆಗೆ ತೀವ್ರ ಹಾನಿಯಾಗಿದೆ. ಪೆÇಯಿತ್ತಾಜೆ ನಿವಾಸಿಗಳಾದ ಫೆಲಿಕ್ಸ್ ಡಿಸಿಲ್ವ ಬಿನ್ ಪೇದ್ರು ಡಿಸಿಲ್ವ ಹಾಗೂ ಯೋಗೀಶ್ ಬಿನ್ ನಾರಾಯಣ ಸಪಲ್ಯ ಅವರ ಅಡಿಕೆ ತೋಟಕ್ಕೆ ಹಾನಿಯಾಗಿದೆ. ಯೋಗೀಶ ಬಿನ್ ನಾರಾಯಣ ಸಪಲ್ಯ ಅವರ ಅಡಿಕೆ ತೋಟಕ್ಕೂ ಹಾ£ಯಾಗಿರುತ್ತದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಭಾರೀ ಮಳೆಗೆ ಹಲವೆಡೆ ಮನೆ, ತೋಟಗಳಿಗೆ ಹಾನಿ Rating: 5 Reviewed By: karavali Times
Scroll to Top