ವಿಟ್ಲ ಕಸಬಾ : ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು - Karavali Times ವಿಟ್ಲ ಕಸಬಾ : ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು - Karavali Times

728x90

13 July 2026

ವಿಟ್ಲ ಕಸಬಾ : ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಬಂಟ್ವಾಳ, ಜುಲೈ 13, 2026 (ಕರಾವಳಿ ಟೈಮ್ಸ್) : ಗೋಡೆಯ ಗಾರೆ ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ವಿಟ್ಲ ಕಸಬಾ ಗ್ರಾಮದ ಮೂದೂರು ಎಂಬಲ್ಲಿ ಜುಲೈ 12 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ. 

ಮೃತರನ್ನು ಇಲ್ಲಿನ ನಿವಾಸಿ ಕುಶಾಲಪ್ಪ ಗೌಡ (55) ಎಂದು ಹೆಸರಿಸಲಾಗಿದೆ. ಇವರು ವಿಟ್ಲ ಕಸಬಾ ಗ್ರಾಮದ ಮೂದೂರು ಎಂಬಲ್ಲಿ ಇಬ್ಬರು ಕೆಲಸಗಾರರ ಜೊತೆ ಮನೆಯ ಗೋಡೆಯ ಗಾರೆಯ ಕೆಲಸ ಮಾಡುತ್ತಿದ್ದ ವೇಳೆ ನೆಲದ ಮೇಲಿದ್ದ ಗೋಡೆ ಕಟ್ಟುವ ಕೆಂಪು ಕಲ್ಲನ್ನು ಎತ್ತುವ ವೇಳೆ ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಎಬ್ಬಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅವರ ಪುತ್ರ ಹರ್ಷಿತ್ ಅವರು ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ ಕಸಬಾ : ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು Rating: 5 Reviewed By: karavali Times
Scroll to Top