ವಿಳಾಸ ಬದಲಾಯಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಸುರತ್ಕಲ್ ಪೊಲೀಸರ ಬಲೆಗೆ - Karavali Times ವಿಳಾಸ ಬದಲಾಯಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಸುರತ್ಕಲ್ ಪೊಲೀಸರ ಬಲೆಗೆ - Karavali Times

728x90

14 July 2026

ವಿಳಾಸ ಬದಲಾಯಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಸುರತ್ಕಲ್ ಪೊಲೀಸರ ಬಲೆಗೆ

ಮಂಗಳೂರು, ಜುಲೈ 14, 2026 (ಕರಾವಳಿ ಟೈಮ್ಸ್) : ಮಂಗಳೂರು ಕಂಕನಾಡಿ ನಗರ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದ ಆರೋಪಿಯಾಗಿದ್ದು ನ್ಯಾಯಾಲಯದ ವಾರಂಟ್ ಇದ್ದರೂ ವಿಳಾಸ ಬದಲಾಯಿಸಿ ವಾಸವಾಗಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಸುರತ್ಕಲ್-ಚಕ್ರವರ್ತಿ ಗ್ರೌಂಡ್ ಸಮೀಪದ ನಿವಾಸಿ ದಿವಂಗತ ಮೊಹಮ್ಮದ್ ಶರೀಫ್ ಅವರ ಪುತ್ರ ಉಮ್ಮರ್ ಫಾರೂಕ್ ಎಂದು ಹೆಸರಿಸಲಾಗಿದೆ. 

ಈತ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದ ಕಾರಣ 6ನೇ ಜೆಎಂಎಫ್‍ಸಿ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿತ್ತು. ಈತನನ್ನು ಜುಲೈ 14 ರಂದು ಸುರತ್ಕಲ್ ಠಾಣಾ ಎಎಸ್ಸೈ ಜಗದೀಶ್, ಎಚ್ ಸಿ ಬಾಲರಾಜ್ ಹಾಗೂ ಪಿಸಿ ರವಿಕುಮಾರ್ ಅವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ಈತನ ವಿರುದ್ದ ಶಸ್ತ್ರಾಸ್ತ್ರ ಕಾಯ್ದೆ ಸಹಿತ ಸುರತ್ಕಲ್, ಯೆಲ್ಲಾಪುರ, ಪಡುಬಿದ್ರೆ, ಕಾವೂರು, ಮಂಗಳೂರು ದಕ್ಷಿಣ, ಬರ್ಕೆ ಹಾಗೂ ಮಂಗಳೂರು ಗ್ರಾಮಾಂತರ ಸಹಿತ ವಿವಿಧ ಠಾಣೆಗಳಲ್ಲಿ ಸುಮಾರು 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ವಿಳಾಸ ಬದಲಾಯಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ ಸುರತ್ಕಲ್ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top