ಮಂಗಳೂರು, ಜುಲೈ 14, 2026 (ಕರಾವಳಿ ಟೈಮ್ಸ್) : ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 23 ಪ್ರಕರಣಗಳ ಆರೋಪಿಯಾಗಿದ್ದು, ಪೊಲೀಸರ ಕಣ್ತಪ್ಪಿಸಲು ಬುರ್ಖಾ ಧರಿಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ರೌಡಿಯನ್ನು ಉಳ್ಳಾಲ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ-ಮೇಲಂಗಡಿ ದರ್ಗಾ ರಸ್ತೆಯ ನಿವಾಸಿ ದಿವಂಗತ ಹಸನಬ್ಬ ಎಂಬವರ ಪುತ್ರ ಇಮ್ರಾನ್ ಸುರ್ಮೋ ಎಂದು ಗುರುತಿಸಲಾಗಿದೆ.
ಈತನ ವಿರುದ್ದ ಹಲವು ಪ್ರಕರಣಗಳಲ್ಲಿ ವಾರಂಟುಗಳಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ಪೆÇಲೀಸರಿಂದ ತಪ್ಪಿಸಿಕೊಳ್ಳಲು ಬುರ್ಖಾ ಹಾಕಿಕೊಂಡು ತಲೆಮರೆಸಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ದ ಉಳ್ಳಾ, ಬರ್ಕೆ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.











0 comments:
Post a Comment