ಕಡಬ, ಆಗಸ್ಟ್ 25, 2026 (ಕರಾವಳಿ ಟೈಮ್ಸ್) : ಕಿಂಗ್ಸ್ ಬಜಾರ್ ಎಂಬ ಸಂಸ್ಥೆಯ ಹೆಸರಿನಲ್ಲಿ ಹಣ ಸಕ್ರ್ಯುಲೇಷನ್ ಯೋಜನೆ ನಡೆಸಿ ವಂಚಿಸಲು ಯತ್ನಿಸುತ್ತಿದ್ದವರ ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಾವೇರಿ ಮೂಲದ ಕಿಂಗ್ಸ್ ಬಝಾರ್ ಎಂಬ ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಶೀಘ್ರವಾಗಿ ಹಣ ಗಳಿಸಬಹುದಾಗಿ, ಹೆಚ್ಚಿನ ಬೆಲೆಯ ವಸ್ತುಗಳನ್ನು ಕಡಿಮೆ ದರದಲ್ಲಿ ಪಡೆಯಬಹುದು ಹಾಗೂ ಜನರನ್ನು ಸದ್ರಿ ಯೋಜನೆಗೆ ಸೇರಿಸಿದಲ್ಲಿ ಕಮಿಷನ್ ಹಣ ಸಂಪಾದಿಸಬಹುದಾಗಿ ಭರವಸೆ ನೀಡಿ, ಅಕ್ರಮವಾಗಿ ನಿಷೇಧಿತ ಹಣ ಪರಿಚಲನೆ ಯೋಜನೆ ನಡೆಸಿ ಹಣವನ್ನು ಸ್ವೀಕರಿಸುವ ಯೋಜನೆ ನಡೆಸುತ್ತಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಕಿಂಗ್ಸ್ ಬಝಾರ್ ಸಂಸ್ಥೆ, ಸಂಸ್ಥೆಯ ಮಾಲಿಕರು ಮತ್ತು ಯೋಜನೆಯನ್ನು ಸ್ಥಳೀಯವಾಗಿ ನಡೆಸುತ್ತಿದ್ದ ಬೆಳ್ತಂಗಡಿ ಕೊಕ್ಕಡ ನಿವಾಸಿಗಳಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50) ಹಾಗೂ ಗುರುಮೂರ್ತಿ (54), ಕಡಬ-ಬಿಳಿನೆಲೆ ನಿವಾಸಿಗಳಾದ ಸುರೇಶ್ ಆರ್ ಎಸ್ (55), ಕಿರಣ್ ಕುಮಾರ್ (21) ಹಾಗೂ ಶ್ರೀನಾಥ್ (48), ಕಡಬ-ಕೌಕ್ರಾಡಿ ನಿವಾಸಿ ಬಾಲಕೃಷ್ಣ ಪಿ ಎಚ್ (42), ಪುತ್ತೂರು ನಿವಾಸಿ ಸಂದೇಶ್ ಎಂಬವರುಗಳ ವಿರುದ್ಧ ಕಡಬ ಪೆÇಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 100/2026, ಕಲಂ 4, 5, 6 ಪ್ರೈಝ್ ಚಿಟ್ ಆಂಡ್ ಮನಿ ಸಕ್ರ್ಯುಲೇಷನ್ ಸ್ಕೀಮ್ಸ್ (ಬ್ಯಾನಿಂಗ್) ಆಕ್ಟ್ 1978 ರಂತೆ ಸ್ವ ಪಿರ್ಯಾದಿ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




















0 comments:
Post a Comment