p>ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಬೋಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷೆ ಉಷಾ ಎಸ್ ರಾಜ್ ಧ್ವಜಾರೋಹಣಗೈದರು.
ದಿನೇಶ್ ಕಾಮತ್ ಪುತ್ತೂರು, ಎಂ ಎನ್ ಕುಮಾರ್ ಮೆಲ್ಕಾರ್, ಪೂರ್ಣೇಶ್ ಆಚಾರ್ಯ, ಮುಕ್ತಾರ್ ಅಹಮದ್, ಶಿಕ್ಷಕಿ ಸುನಿತಾ ಚಿದಾನಂದ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವದಾಸ್ ಶೆಟ್ಟಿಗಾರ್, ಕೃಷ್ಣ ನಾಯಕ್, ಜನಾರ್ಧನ್, ಮೊಹಮ್ಮದ್ ಬೋಳಂಗಡಿ, ಶಿವಾನಂದ ಸೇನೆರೆಬೈಲು, ಹಾರಿಸ್ ಆಚಿ, ಸುಧಾಕರ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಅವರು ಗಣಕ ಯಂತ್ರ ಹಾಗೂ ಎಲ್ ಇ ಡಿ ಟಿವಿ ಶಾಲೆಗೆ ಕೊಡುಗೆಯಾಗಿ ಹಸ್ತಾಂತರಿಸಿದರು. ಶಾಲಾಭಿವೃದ್ದಿಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ರಾಜೇಶ್ ವೈ ಎನ್ ಸ್ವಾಗತಿಸಿ, ವಿನಯ ಕುಮಾರಿ ವಂದಿಸಿದರು. ಸಹ ಶಿಕ್ಷಕಿ ಚಿತ್ರಲೇಖ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಅಸ್ಮತ್ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆಗೈದರು.


























0 comments:
Post a Comment