ಮಂಗಳೂರು, ಆಗಸ್ಟ್ 23, 2026 (ಕರಾವಳಿ ಟೈಮ್ಸ್) : 10 ವರ್ಷಗಳಿಂದ ದಸ್ತಗಿರಿಗೆ ಸಿಗದೇ ತಲೆಮರಿಸಿಕೊಂಡಿದ್ದ ಎಲ್ ಪಿ ಸಿ ಆರೋಪಿಯೋರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಂiÀiನ್ನು ಕುದ್ರೋಳಿ-ಕರ್ಬಲಾ ರೋಡ್ ನಿವಾಸಿ ಹೈದರ್ ಎಂಬವರ ಪುತ್ರ ನೌಫಲ್ (34) ಎಂದು ಹೆಸರಿಸಲಾಗಿದೆ.
ಆರೋಪಿತನ ವಿರುದ್ದ ಮಂಗಳೂರು ದಕ್ಷಿಣ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 184/2016 ಕಲಂ 143, 147, 341, 353, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಪ್ರಕರಣ ದಾಖಲಾಗಿನಿಂದಲೂ ದಸ್ತಗಿರಿಗೆ ಸಿಗದೇ ತಲಮರಿಸಿಕೊಂಡಿದ್ದ ಕಾರಣ ಆರೋಪಿತನ ಮೇಲೆ ಅಬ್ಸ್ಕಾಂಡಿಂಗ್ ಚಾರ್ಜ್ ಶೀಟ್ ಸಲ್ಲಿಸಲಾಗಿರುತ್ತದೆ.
ಆರೋಪಿತನು ಸುಮಾರು 10 ವರ್ಷಗಳಿಂದ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದು ಆರೋಪಿಯು ಇರುವಿಕೆಯ ಬಗ್ಗೆ ಮಂಗಳೂರು ದಕ್ಷಿಣ ಪೆÇಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.











0 comments:
Post a Comment