ಸೆಪ್ಟೆಂಬರ್ 8 ರ ಕ್ರೈಸ್ತರ ಶ್ರದ್ದಾ ಭಕ್ತಿಯ ತೆನೆ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸುವಂತೆ ಐವನ್ ಡಿಸೋಜ ಆಗ್ರಹ - Karavali Times ಸೆಪ್ಟೆಂಬರ್ 8 ರ ಕ್ರೈಸ್ತರ ಶ್ರದ್ದಾ ಭಕ್ತಿಯ ತೆನೆ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸುವಂತೆ ಐವನ್ ಡಿಸೋಜ ಆಗ್ರಹ - Karavali Times

728x90

24 August 2026

ಸೆಪ್ಟೆಂಬರ್ 8 ರ ಕ್ರೈಸ್ತರ ಶ್ರದ್ದಾ ಭಕ್ತಿಯ ತೆನೆ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸುವಂತೆ ಐವನ್ ಡಿಸೋಜ ಆಗ್ರಹ

ಮಂಗಳೂರು, ಆಗಸ್ಟ್ 24, 2026 (ಕರಾವಳಿ ಟೈಮ್ಸ್) : ಸೆಪ್ಟೆಂಬರ್ 8 ರಂದು ನಡೆಯುವ ಕ್ರೈಸ್ತರ ಶ್ರದ್ದಾ ಭಕ್ತಿಯ ತೆನೆ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಆಗಸ್ಟ್ 24 ರಂದು ವಿಧಾನ ಪರಿಷತ್ತಿನ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಐವನ್ ಅವರು ಸಪ್ಟೆಂಬರ್ 8  ರಂದು ಕ್ರೈಸ್ತ ಸಮುದಾಯವರು ಆಚರಿಸುವ ದೇವಮಾತೆ ಕನ್ಯಾ ಮರಿಯಮ್ಮ ಜನ್ಮದಿನವನ್ನು ಕರಾವಳಿ ಭಾಗದ ಕ್ರೈಸ್ತ ಬಾಂಧ್ಯರವರು ತೆನೆ ಹಬ್ಬವಾಗಿ ಶ್ರದ್ದಾ ಭಕ್ತಿಯಿಂದ ಆಚರಿಸುತ್ತಾರೆ. ಈ ಸಂದರ್ಭ ಸರಕಾರಿ ರಜೆ ಘೋಷಿಸುವಂತೆ ಸದನದ ಶೂನ್ಯ ವೇಳೆಯಲ್ಲಿ ಸಭಾಪತಿಯವರ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆದರು.

  • Blogger Comments
  • Facebook Comments

0 comments:

Post a Comment

Item Reviewed: ಸೆಪ್ಟೆಂಬರ್ 8 ರ ಕ್ರೈಸ್ತರ ಶ್ರದ್ದಾ ಭಕ್ತಿಯ ತೆನೆ ಹಬ್ಬಕ್ಕೆ ಕರಾವಳಿ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸುವಂತೆ ಐವನ್ ಡಿಸೋಜ ಆಗ್ರಹ Rating: 5 Reviewed By: karavali Times
Scroll to Top