ತಂಗಿಯನ್ನೇ ಸುತ್ತಿಗೆಯಿಂದ ಬಡಿದು ಕೊಂದ ಅಪರಾಧಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು - Karavali Times ತಂಗಿಯನ್ನೇ ಸುತ್ತಿಗೆಯಿಂದ ಬಡಿದು ಕೊಂದ ಅಪರಾಧಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು - Karavali Times

728x90

26 August 2026

ತಂಗಿಯನ್ನೇ ಸುತ್ತಿಗೆಯಿಂದ ಬಡಿದು ಕೊಂದ ಅಪರಾಧಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು

ಮಂಗಳೂರು, ಆಗಸ್ಟ್ 26, 2026 (ಕರಾವಳಿ ಟೈಮ್ಸ್) : ತನ್ನ ತಂಗಿಯನ್ನೇ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದ ಆರೋಪಿ ಅಣ್ಣನಿಗೆ ನ್ಯಾಯಾಲಯ 4 ವರ್ಷಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ಶಿಕ್ಷೆಗೊಳಗಾದ ಅಪರಾಧಿಯನ್ನು ಕಂಬಳಪದವು ನಿವಾಸಿ ಸ್ಯಾಮ್ಸನ್ ಕುಟಿನ್ಹಾ ಎಂದು ಹೆಸರಿಸಲಾಗಿದೆ. 2019 ರ ಅಕ್ಟೋಬರ್ 8 ರಂದು ಮಧ್ಯಾಹ್ನ 12 ಗಂಟೆಗೆ ತನ್ನ ವಾಸದ ಮನೆಯಾದ ಕಂಬಳಪದವು ಎಂಬಲ್ಲಿ  ಅಪರಾಧಿ ಕುಟಿನ್ಹಾ ಆತನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಎಂಬವಳೊಂದಿಗೆ ಮೊಬೈಲ್ ಉಪಯೋಗಿಸಲು ಕೊಡುವಂತೆ ಕೇಳಿದಾಗ ಮೊಬೈಲ್ ವಿಚಾರವಾಗಿ ಅವರೊಳಗೆ ಮಾತುಕತೆಯಾದ ಸಮಯ ಕೋಪಗೊಂಡು ಕುಟಿನ್ಹಾ ಸುತ್ತಿಗೆಯಿಂದ ಆಕೆಯ ತಲೆಗೆ ಹಲ್ಲೆ ನಡೆಸಿ, ಆಕೆಯನ್ನು ಕೊಲೆ ಮಾಡಿ, ಆಕೆಯ ಮೃತದೇಹವನ್ನು ಮನೆಯ ಹಿಂಭಾಗದ ಪೆÇದೆಯಲ್ಲಿ ಬಚ್ಚಿಟ್ಟಿದ್ದ.  ಮೃತ ಸ್ವೀಡಲ್ ಕುಟಿನ್ಹಾ ಅವರ ತಂದೆ ಪ್ರಾನ್ಸಿಸ್ ಕುಟಿನ್ಹಾ ಅವರು ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ದಕ್ಷಿಣ ಎಸಿಪಿ ಟಿ. ಕೋದಂಡ ರಾಮ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಕಲಂ 302, 201 ಐಪಿಸಿ ಪ್ರಕಾರ ದಿನಾಂಕ 2020 ಅಕ್ಟೋಬರ್ 10 ರಂದು ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2026 ಆಗಸ್ಟ್ 24 ರಂದು ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾಗೆ ಕಲಂ 304 (11) ಐಪಿಸಿಗೆ 4 ವರ್ಷ ಸಜೆ ಮತ್ತು 10 ಸಾವಿರ ರೂಪಾಯಿ ದಂಡ, ಕಲಂ 201 ಐಪಿಸಿಗೆ 1 ವರ್ಷ ಸಜೆ ಮತ್ತು 1 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಅಭಿಯೋಜನ ಪರವಾಗಿ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ವಾದ ಮಂಡಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ತಂಗಿಯನ್ನೇ ಸುತ್ತಿಗೆಯಿಂದ ಬಡಿದು ಕೊಂದ ಅಪರಾಧಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು Rating: 5 Reviewed By: karavali Times
Scroll to Top