ಪುತ್ತೂರು : ಪ್ರತಿಭಟನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಪರವಾನಿಗೆ ಇದೆಯೇ ಎಂದು ತಿಳಿದುಕೊಳ್ಳಲು ಜಿಲ್ಲಾ ಎಸ್ಪಿ ಸೂಚನೆ - Karavali Times ಪುತ್ತೂರು : ಪ್ರತಿಭಟನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಪರವಾನಿಗೆ ಇದೆಯೇ ಎಂದು ತಿಳಿದುಕೊಳ್ಳಲು ಜಿಲ್ಲಾ ಎಸ್ಪಿ ಸೂಚನೆ - Karavali Times

728x90

27 August 2026

ಪುತ್ತೂರು : ಪ್ರತಿಭಟನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಪರವಾನಿಗೆ ಇದೆಯೇ ಎಂದು ತಿಳಿದುಕೊಳ್ಳಲು ಜಿಲ್ಲಾ ಎಸ್ಪಿ ಸೂಚನೆ

ಪುತ್ತೂರು, ಆಗಸ್ಟ್ 27, 2026 (ಕರಾವಳಿ ಟೈಮ್ಸ್) : ಅಗಸ್ಟ್ 31 ರಂದು ಪುತ್ತೂರಿನಲ್ಲಿ ಪ್ರತಿಭಟನಾ ಸಭೆ ನಡೆಸಲು ಅನುಮತಿ ಕೋರಿ ಈಗಾಗಲೇ ಒಂದು ಸಂಘಟನೆ ಅರ್ಜಿ ಸಲ್ಲಿಸಿರುತ್ತದೆ. ಸದ್ರಿ ಅರ್ಜಿಯಲ್ಲಿ ತಿಳಿಸಲಾಗಿರುವ ಪ್ರತಿಭಟನಾ ಸ್ಥಳವು ಮಾರ್ಗಸೂಚಿಗಳ ಅನುಸಾರವಾಗಿ ಇಲ್ಲದಿರುವುದರಿಂದ ಸೂಕ್ತ ಸ್ಥಳವನ್ನು ಗುರುತಿಸಿ ಮರು ಅರ್ಜಿ ಸಲ್ಲಿಸುವಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿ, ಮಾರ್ಗಸೂಚಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಲಾಗಿರುತ್ತದೆ.

ಇನ್ನೊಂದು ಸಂಘಟನೆಯು ಅದೇ ದಿನ ಅಂದರೆ ಆಗಸ್ಟ್ 31 ರಂದು ಪುತ್ತೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಸದ್ರಿ ಸಂಘಟನೆಯು ಈ ಬಗ್ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿರುವುದಿಲ್ಲ. ಅನುಮತಿಗಾಗಿ ಅರ್ಜಿ ಸಲ್ಲಿಸಿದಲ್ಲಿ ಬೇರೊಂದು ದಿನಾಂಕವನ್ನು ನಿಗದಿಪಡಿಸಿ ಅನುಮತಿ ಪಡೆಯಲು ಸೂಚಿಸಲಾಗುವುದು.

ಸಾರ್ವಜನಿಕರು ಪ್ರತಿಭಟನೆಯಂತಹ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಪೂರ್ವದಲ್ಲೇ, ಕಾರ್ಯಕ್ರಮದ ಆಯೋಜಕರು ಸದ್ರಿ ಕಾರ್ಯಕ್ರಮಕ್ಕೆ ಅಗತ್ಯವಾದ ಅನುಮತಿಯನ್ನು, ಸಂಬಂಧಿಸಿದ ಇಲಾಖೆಯಿಂದ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾ ಎಸ್ಪಿ ಡಾ ಕೆ ಅರುಣ್ ಅವರು ತಿಳಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಪ್ರತಿಭಟನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೊದಲು ಪರವಾನಿಗೆ ಇದೆಯೇ ಎಂದು ತಿಳಿದುಕೊಳ್ಳಲು ಜಿಲ್ಲಾ ಎಸ್ಪಿ ಸೂಚನೆ Rating: 5 Reviewed By: karavali Times
Scroll to Top