ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಧ್ವಜಾರೋಹಣಗೈದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ್ ರಾವ್ ಮಾತನಾಡಿ, ಭವ್ಯ ಭಾರತದ ಭವಿಷ್ಯದ ಕನಸುಗಳನ್ನು ನಾವು ಶಾಲೆಯಲ್ಲಿ ಕಾಣುತ್ತಿದ್ದೇವೆ. ಪ್ರತಿ ಮಗುವಿನಲ್ಲೂ ದೇಶಪ್ರೇಮ, ಪರಿಸರ ಕಾಳಜಿ, ಹಿರಿಯರಿಗೆ ಗೌರವ ಮುಂತಾದ ಸಂಸ್ಕಾರ ಪೂರಿತ ಶಿಕ್ಷಣ ಪಠ್ಯದ ಜೊತೆ ಜೊತೆಗೆ ಮೂಡಿ ಬರುವಂತಾದರೆ ಹಿರಿಯರು ಗಳಿಸಿಕೊಟ್ಟ ಭಾರತದ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ ಎಂದರು. ಶಾಲಾ ನಾಯಕಿ ಕುಮಾರಿ ನೀಸಾ ಧ್ವಜವಂದನೆ ಮಾಡಿ ಗಣ್ಯರನ್ನು ಗೌರವಿಸಿದರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಶೋಧ ಬಿ ಶೆಟ್ಟಿ, ವಿದ್ಯಾರ್ಥಿಗಳ ಪೆÇೀಷಕರು, ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ಸ್ವಾಗತಿಸಿ, ಶಿಕ್ಷಕ ಜಗನ್ನಾಥ ಪಿ ವಂದಿಸಿದರು, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿನೋದ ಕಾರ್ಯಕ್ರಮ ನಿರೂಪಿಸಿದರು.





















0 comments:
Post a Comment