ಕೊರೋನಾ ವೈರಸ್ ಎಫೆಕ್ಟ್ : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮುಂದೂಡಿಕೆ - Karavali Times ಕೊರೋನಾ ವೈರಸ್ ಎಫೆಕ್ಟ್ : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮುಂದೂಡಿಕೆ - Karavali Times

728x90

26 March 2020

ಕೊರೋನಾ ವೈರಸ್ ಎಫೆಕ್ಟ್ : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮುಂದೂಡಿಕೆ



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಇಡೀ ದೇಶ ಲಾಕ್ ಡೌನ್ ಮಾಡಿರುವ ಕಾರಣ 2020ರ ಏಪ್ರಿಲ್ 11 ರಂದು ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಯನ್ನು ಮುಂದೂಡಲಾಗಿದೆ.

ಕೊವಿಡ್-19 ನಿಯಂತ್ರಣ ಸಂಬಂಧ 21 ದಿನಗಳ ಕಾಲ ಇಡೀ ದೇಶ ಲಾಕ್ ಡೌನ್‍ಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಆದ ಕಾರಣ ಟಿಇಟಿ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ವೈರಸ್ ಎಫೆಕ್ಟ್ : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮುಂದೂಡಿಕೆ Rating: 5 Reviewed By: karavali Times
Scroll to Top