ಬಂಟ್ವಾಳ (ಕರಾವಳಿ ಟೈಮ್ಸ್) : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 129 ನೇ ಜನ್ಮ ಜಯಂತಿಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಪೀಠಿಕೆ ಪಠಿಸುವ ಮುಖಾಂತರ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಗದೀಶ್ ಕೊಯಿಲ, ರಿಯಾಝ್ ಹುಸೈನ್ ಬಂಟ್ವಾಳ, ಅಮ್ಮು ಅರ್ಬಿಗುಡ್ಡೆ, ಮನೋಹರ ನೇರಂಬೊಳ್, ದಯಾನಂದ ನೇರಂಬೊಳ್, ಮೋಹನ್ ಗೌಡ, ವೆಂಕಪ್ಪ ಪೂಜಾರಿ, ಕಾಸಿಂ ಬಂಟ್ವಾಳ, ಜಗನ್ನಾಥ್ ತುಂಬೆ, ಚಿಕ್ಕು ಅರ್ಬಿಗುಡ್ಡೆ, ಕೃಷ್ಣಪ್ಪ ಮಯಾರ್ಣಪಾದೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment