ಬಾರ್ ಹಾಗೂ ವೈನ್‍ಶಾಪ್ ಮಾಲಕರಿಗೆ ಬಂಟ್ವಾಳ ಪೊಲೀಸರ ಎಚ್ಚರಿಕಾ ಸೂಚನೆ - Karavali Times ಬಾರ್ ಹಾಗೂ ವೈನ್‍ಶಾಪ್ ಮಾಲಕರಿಗೆ ಬಂಟ್ವಾಳ ಪೊಲೀಸರ ಎಚ್ಚರಿಕಾ ಸೂಚನೆ - Karavali Times

728x90

8 April 2020

ಬಾರ್ ಹಾಗೂ ವೈನ್‍ಶಾಪ್ ಮಾಲಕರಿಗೆ ಬಂಟ್ವಾಳ ಪೊಲೀಸರ ಎಚ್ಚರಿಕಾ ಸೂಚನೆಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಅವಧಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಮದ್ಯ ವ್ಯಸನಿಗಳು ಇಂತಹ ಸಂದರ್ಭದಲ್ಲಿ ಬಾರ್ ಮತ್ತು ವೈನ್‍ಶಾಪ್‍ಗಳಲ್ಲಿ ದಾಳಿ ಮಾಡಿ ಮದ್ಯವನ್ನು ಕೊಳ್ಳೆ ಹೊಡೆಯುವ ಸಂಭವದ ಬಗ್ಗೆ ಸಂಶಯಿಸಲಾಗಿದೆ. ಈಗಾಗಲೇ ಕೆಲವೆಡೆ ಇಂತಹ ಕೃತ್ಯಗಳು ನಡೆದುದರ ಬಗ್ಗೆ ವರದಿಯಾಗಿರುವ ಹಿನ್ನಲೆಯಲ್ಲಿ ಮದ್ಯದಂಗಡಿಗಳಲ್ಲಿ ಹೆಚ್ಚಿನ ನಗದು ಹಣ ಇರದಂತೆ ನೋಡಿಕೊಳ್ಳುವುದು. ಕೀ ಲಾಕರ್‍ಗಳನ್ನು ಬಳಕೆ ಮಾಡಿಕೊಳ್ಳುವುದು, ಸೀಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು, ಮಾಲೀಕರು ಅಥವಾ ವ್ಯವಸ್ಥಾಪಕರು ಆಗಾಗ ಅಂಗಡಿಗೆ ಭೇಟಿ ನೀಡಿ ಭದ್ರತೆಯನ್ನು ಖಚಿತಪಡಿಸಿಕೊಳ್ಳತಕ್ಕದ್ದು ಹಾಗೂ ಸ್ಥಳೀಯ ಪೆÇಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಇವೇ ಮೊದಲಾದ ಸೂಚನೆಗಳನ್ನು ಮದ್ಯದಂಗಡಿ ಮಾಲಕರು ಪಾಲಿಸತಕ್ಕದ್ದು. ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಮೂಲ್ಯ, ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಕೈ ಜೋಡಿಸುವಂತೆ ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್ಸೈ ಸಂತೋಷ್ ಬಿ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಬಾರ್ ಹಾಗೂ ವೈನ್‍ಶಾಪ್ ಮಾಲಕರಿಗೆ ಬಂಟ್ವಾಳ ಪೊಲೀಸರ ಎಚ್ಚರಿಕಾ ಸೂಚನೆ Rating: 5 Reviewed By: karavali Times
Scroll to Top