ತಮಿಳ್ನಾಡು : ಕೊರೋನಾ ವೈರಸ್ಸಿಗೆ ಡಿಎಂಕೆ ಶಾಸಕ ಬಲಿ - Karavali Times ತಮಿಳ್ನಾಡು : ಕೊರೋನಾ ವೈರಸ್ಸಿಗೆ ಡಿಎಂಕೆ ಶಾಸಕ ಬಲಿ - Karavali Times

728x90

9 June 2020

ತಮಿಳ್ನಾಡು : ಕೊರೋನಾ ವೈರಸ್ಸಿಗೆ ಡಿಎಂಕೆ ಶಾಸಕ ಬಲಿ



ಚೆನ್ನೈ (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಡಿಎಂಕೆ ಹಿರಿಯ ಶಾಸಕ ಜೆ. ಅನ್ಬಳಗನ್ (62) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

 ಶಾಸಕ ಜೆ.ಅನ್ಬಳಗನ್ ಅವರನ್ನು ಜೂನ್ 2 ರಂದು ಡಾ. ರೇಲಾ ಇನ್ಸ್ಟಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಹೀಗಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅನ್ಬಳಗನ್ ಆಸ್ಪತ್ರೆಗೆ ದಾಖಲಾಗಿದ್ದಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಕುಸಿದಿತ್ತು. ನಂತರವೂ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಕೊರೊನಾ ಸೋಂಕಿನ ಜೊತೆಗೆ ಅವರಿಗೆ ರಕ್ತದೊತ್ತಡ, ಕಿಡ್ನಿ ಸಮಸ್ಯೆ ಕೂಡ ಇದ್ದಿತ್ತು. ಹೀಗಾಗಿ ಕೊರೊನಾ ಸೋಂಕಿನಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ

 ಕೆಲ ದಿನಗಳ ಹಿಂದೆ ಅನ್ಬಳಗನ್ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ತಕ್ಷಣ ಡಾ. ರೇಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಕೋವಿಡ್-19 ಪರೀಕ್ಷೆಯನ್ನು ನಡೆಸಲಾಗಿತ್ತು. ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಅನ್ಬಳಗನ್ ಮೃತಪಟ್ಟಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ತಮಿಳ್ನಾಡು : ಕೊರೋನಾ ವೈರಸ್ಸಿಗೆ ಡಿಎಂಕೆ ಶಾಸಕ ಬಲಿ Rating: 5 Reviewed By: karavali Times
Scroll to Top