ಬಂಟ್ವಾಳ ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆ - Karavali Times ಬಂಟ್ವಾಳ ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆ - Karavali Times

728x90

9 August 2020

ಬಂಟ್ವಾಳ ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆ

 

ಬಂಟ್ವಾಳ (ಕರಾವಳಿ ಟೈಮ್ಸ್) : ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಬಂಟ್ವಾಳ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿಗಳ ಘೋಷಣೆ ಮತ್ತು ಕಾರ್ಯಕಾರಣಿ ಸಭೆ ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ. ಕಛೇರಿಯಲ್ಲಿ ನಡೆಯಿತು. 

ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಂಡಲದ ಹಿಂದುಳಿದ ವರ್ಗಗಳ ಅಧ್ಯಕ್ಷ ಆನಂದ ಶಂಭೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಉದ್ಘಾಟಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ ನೂತನ ಪದಾಧಿಕಾರಿಗಳನ್ನು ಪಕ್ಷದ ಶಾಲು ಹಾಕಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಬಂಟ್ವಾಳ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಉಪಾಧ್ಯಕ್ಷ ಯಾದವ ಕೋಟ್ಯಾನ್, ಕಾರ್ಯದರ್ಶಿ ಉದಯ ಕುಮಾರ್ ಕಾಂಜಿಲ, ಕ್ಷೇತ್ರ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ, ಮಂಡಲ ಉಪಾಧ್ಯಕ್ಷ ಚಿದಾನಂದ ರೈ, ಕಾರ್ಯಕಾರಿಣಿ ಸದಸ್ಯ ಜಿನ್‍ರಾಜ್ ಕೋಟ್ಯಾನ್, ಕಾರ್ಯಾಲಯ ಕಾರ್ಯದರ್ಶಿ ಗುರುದತ್ ನಾಯಕ್, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾಗಳ ಸದಸ್ಯ ಮಚ್ಚೇಂದ್ರನಾಥ್ ಸಾಲ್ಯಾನ್, ಹಿಂದುಳಿದ ವರ್ಗ ಮೋರ್ಚಾಗಳ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ, ಪುರುಷೋತ್ತಮ ಟೈಲರ್, ಕಾರ್ಯದರ್ಶಿಗಳಾದ ಮೋಹನದಾಸ ಕೊಟ್ಟಾರಿ, ಸಂತೋಷ, ಚಿದಾನಂದ, ಕೋಶಾಧಿಕಾರಿ ಪರಮೇಶ್ವರ ಪೂಜಾರಿ, ಸದಸ್ಯರಾದ ಯೋಗೀಶ, ವೀರಪ್ಪ ಮೂಲ್ಯ, ಸುರೇಶ್ ಮೈರ, ಕಿಶೋರ್ ದಾಸರಕೋಡಿ, ಯತೀಶ್ ಕುಕ್ಕಾಜೆ, ಅಶೋಕ್ ಮರ್ದೋಳಿ ಮೊದಲಾದವರು ಭಾಗವಹಿಸಿದ್ದರು. ಮಂಡಲ ಹಿಂದುಳಿದ ವರ್ಗ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿ ಉಮೇಶ್ ಡಿ.ಎಂ. ಅರಳ ಕಾರ್ಯಕ್ರಮ ನಿರೂಪಿಸಿದರು.


  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಬಿಜೆಪಿ ಮಂಡಲ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆ Rating: 5 Reviewed By: karavali Times
Scroll to Top