ಗುಜರಾತ್ ಲೋಕಲ್ ಇಲೆಕ್ಷನ್ : ಬಿಜೆಪಿ ಲೀಡ್ - Karavali Times ಗುಜರಾತ್ ಲೋಕಲ್ ಇಲೆಕ್ಷನ್ : ಬಿಜೆಪಿ ಲೀಡ್ - Karavali Times

728x90

23 February 2021

ಗುಜರಾತ್ ಲೋಕಲ್ ಇಲೆಕ್ಷನ್ : ಬಿಜೆಪಿ ಲೀಡ್

ಅಹ್ಮದಾಬಾದ್, ಫೆ. 24, 2021 (ಕರಾವಳಿ ಟೈಮ್ಸ್) : ಗುಜರಾತ್ ರಾಜ್ಯದ 6 ಪುರಸಭೆ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.  576 ಸ್ಥಾನಗಳ ಪೈಕಿ 40 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಚುನಾವಣಾ ಆಯೋಗದ ಇತ್ತೀಚಿನ ವರದಿ ಮೂಲಕ ತಿಳಿದುಬಂದಿದೆ.   ಕಾಂಗ್ರೆಸ್ ಪಕ್ಷ ಈ ವರೆಗೂ 9 ಸ್ಥಾನಗಳಲ್ಲಿ ಗೆದ್ದಿದೆ. ಅಹ್ಮದಾಬಾದ್, ಸೂರತ್, ರಾಜ್ ಕೋಟ್, ವಡೋದರಾ, ಭವ್ ನಗರ್ ಜಾಮ್ ನಗರ್ ಗಳಲ್ಲಿನ 144 ವಾರ್ಡ್ ಗಳ 576 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಈ ಸ್ಥಳೀಯ ಸಂಸ್ಥೆಗಳಲ್ಲಿ ಹಲವು ಅವಧಿಗಳಿಂದ ಬಿಜೆಪಿ ಆಡಳಿತವೇ ಇದೆ. ಅಹ್ಮದಾಬಾದ್ ನಲ್ಲಿ 5 ಸ್ಥಾನಗಳು, ರಾಜ್ ಕೋಟ್ ನಲ್ಲಿ 8, ಸೂರತ್ ನಲ್ಲಿ 4 ವಡೋದರಾದಲ್ಲಿ 9 ಜಾಮ್ ನಗರ ಹಾಗೂ ಭವ್ ನಗರದಲ್ಲಿ 7 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ.  ಕಾಂಗ್ರೆಸ್ ವಡೋದರಾ, ಭವ್ ನಗರ್, ಜಾಮ್ ನಗರಗಳಲ್ಲಿ ತಲಾ ಒಂದು ಸ್ಥಾನ ಸೇರಿ ಈ ವರೆಗೂ 7 ಸ್ಥಾನಗಳಲ್ಲಿ ಗೆದ್ದಿದೆ. ಭಾನುವಾರ ನಡೆದ ಚುನಾವಣೆಯಲ್ಲಿ ಶೇ.46.1 ರಷ್ಟು ಮತದಾನ ನಡೆದಿತ್ತು. 
  • Blogger Comments
  • Facebook Comments

0 comments:

Post a Comment

Item Reviewed: ಗುಜರಾತ್ ಲೋಕಲ್ ಇಲೆಕ್ಷನ್ : ಬಿಜೆಪಿ ಲೀಡ್ Rating: 5 Reviewed By: karavali Times
Scroll to Top