ಬೊಳ್ಳಾಯಿ ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಮಸೀದಿ ವಠಾರದಲ್ಲಿ ಸರಳವಾಗಿ ಆಚರಿಸಲಾಯಿತು.
ಜಮಾಅತ್ ಆಡಳಿತ ಸಮಿತಿ ಉಪಾಧ್ಯಕ್ಷ ಬಿ.ಎಸ್. ಅಬ್ಬಾಸ್ ಧ್ವಜಾರೋಹಣಗೈದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲೀಂ, ಹಿದಾಯತುಲ್ ಇಸ್ಲಾಂ ಮದರಸ ಮುಖ್ಯ ಶಿಕ್ಷಕ ಇಬ್ರಾಹಿಂ ಸಅದಿ, ಅಬ್ದುಲ್ ನಾಸಿರ್ ಸಅದಿ, ಮಹಮ್ಮದ್ ಮುಸ್ತಫಾ ಮೊದಲಾದವರು ಪಾಲ್ಗೊಂಡರು.
ಆಲಾಡಿ ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಬಂಟ್ವಾಳ, ಆಗಸ್ಟ್ 15, 2021 (ಕರಾವಳಿ ಟೈಮ್ಸ್) : ಸಜೀಪಮುನ್ನೂರು ಗ್ರಾಮದ ಆಲಾಡಿ ಬದ್ರಿಯ ಜುಮಾ ಮಸೀದಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಸೀದಿಯ ಅದ್ಯಕ್ಷ ಸಲೀಂ ಆಲಾಡಿ ಧ್ವಜಾರೋಹಣಗೈದರು. ರಶೀದ್ ಹನೀಫಿ, ರಹಿಮಾನ್ ಕುಚ್ಚುಗುಡ್ದೆ, ಶಾಫಿ ಕಲವಾಯಿ, ಯೂಸುಫ್ ಅಂಗಡಿ, ಇಬ್ರಾಹಿಂ ದುಬೈ, ಯೂಸುಫ್ ಮಂಜಲ್ಪಾದೆ, ಆದಂ ಬಾಳಿಕೆ, ಮನ್ಸೂರ್ ಅಂಗಡಿ, ರಿಯಾಝ್ ಫೈಝಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment