ಅಂಚೆ ಇಲಾಖೆಯಿಂದ 9 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಪತ್ರಲೇಖನ ಸ್ಪರ್ಧೆ - Karavali Times ಅಂಚೆ ಇಲಾಖೆಯಿಂದ 9 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಪತ್ರಲೇಖನ ಸ್ಪರ್ಧೆ - Karavali Times

728x90

3 March 2022

ಅಂಚೆ ಇಲಾಖೆಯಿಂದ 9 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಪತ್ರಲೇಖನ ಸ್ಪರ್ಧೆ

ಮಂಗಳೂರು, ಮಾರ್ಚ್ 03, 2022 (ಕರಾವಳಿ ಟೈಮ್ಸ್) : ಅಂಚೆ ಇಲಾಖೆಯು ಅಂತರಾಷ್ಟಿùೀಯ ಮಟ್ಟದಲ್ಲಿ ಪತ್ರ ಲೇಖನ ಸ್ಪರ್ಧೆ ಹಮ್ಮಿಕೊಂಡಿದೆ. ಪತ್ರದ ವಿಷಯ “ಹವಾಮಾನ ಬಿಕ್ಕಟ್ಟಿನ ಸಂಧರ್ಭದಲ್ಲಿ ಯಾಕೆ ಮತ್ತು ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಒಬ್ಬ ಪ್ರಭಾವಿ ವ್ಯಕ್ತಿಗೆ ಪತ್ರ ಬರೆಯಿರಿ” (Write a letter to a someone influential explaining why and how they should take action on the climate crisis) 9 ರಿಂದ 15 ವರುಷದ ಒಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಗರಿಷ್ಠ ಪದಗಳ ಸಂಖ್ಯೆ 800 ಪದಗಳು. 

ಲಿಂಕ್ https://tinyurl.com/5xz7znw4  ಇರುವ ಅರ್ಜಿಯನ್ನು ತುಂಬಿ, ಜನ್ಮ ದಿನಾಂಕ ಆಧಾರದ ಪ್ರತಿಯನ್ನು ಪತ್ರದ ಜೊತೆ ಲಗತ್ತಿಸಿ  “ಟಿ. ರಾಮ ಸುಧಾಕರ ರಾವ್, ಅಸಿಸ್ಟೆಂಟ್ ಡೈರೆಕ್ಟರ್, ನಂ.1, ಮುಖ್ಯ ಪೆÇೀಸ್ಟ್ ಮಾಸ್ಟರ್ ಜನರಲ್ ಕಛೇರಿ, ಬೆಂಗಳೂರು-560001 ಈ ವಿಳಾಸಕ್ಕೆ ಕಳುಹಿಸಬೇಕು. ಕಳುಹಿಸಬೇಕಾದ ಕೊನೆಯ ದಿನಾಂಕ  ಮಾಚ 15, 2022,. ಹೆಚ್ಚಿನ ಮಾಹಿತಿಗಾಗಿ 0824-2217076, 0824-2218400 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆಯಿಂದ 9 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಪತ್ರಲೇಖನ ಸ್ಪರ್ಧೆ Rating: 5 Reviewed By: karavali Times
Scroll to Top