ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ - Karavali Times ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ - Karavali Times

728x90

15 August 2022

ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಉಳ್ಳಾಲ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ಇಲ್ಲಿನ ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ವತಿಯಿಂದ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸೋಮವಾರ ಆಚರಿಸಲಾಯಿತು. ಸ್ಥಳೀಯ ಕೌನ್ಸಿಲರ್ ಮುಶ್ತಾಕ್ ಪಟ್ಲ ಧ್ವಜಾರೋಹಣಗೈದರು. 

ಸ್ಥಳೀಯ ಖತೀಬ್ ಫರ್ಹಾನ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಸಮಿತಿ ಅಧ್ಯಕ್ಷ ಅಶ್ರಫ್, ಪವಿತ್ರಾ ಬ್ರಿಜೇಶ್, ನಾಸೀರ್ ಆಲ್ಫಾ, ರೆಹಮತ್ ಸಾಗರ್, ಮುಹಮ್ಮದ್ ಪಿ.ಎಚ್, ಸಾಜಿದ್ ಇಬ್ರಾಹಿಂ, ಟಿ ಕೆ ಸಲೀಂ ಫರಂಗಿಪೇಟೆ, ನೌಶಾದ್ ಫ್ಯಾಶನ್ ಪಾರ್ಕ್, ಸಿದ್ದೀಕ್ ಯು.ಎಚ್, ಅಬ್ದುಲ್ ಲತೀಫ್ ಸಾಮಣಿಗೆ, ಮೊಹಮ್ಮದ್ ಹನೀಫ್. ಮೊಹಮ್ಮದ್ ಸಲೀಂ, ಆಸಿಫ್ ಮೊದಲಾದವರು ಭಾಗವಹಿಸಿದ್ದರು. 

ಇದೇ ವೇಳೆ ಆಡಳಿತ ಕಮಿಟಿ ಅಧ್ಯಕ್ಷ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು. ಅಫ್ಝಲ್ ವಂದಿಸಿ, ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top