ಮಂಗಳೂರು, ಸೆಪ್ಟೆಂಬರ್ 24, 2022 (ಕರಾವಳಿ ಟೈಮ್ಸ್) : ಟೀಮ್ ಮ್ಯಾಟ್ರಿಕ್ಸ್ ಮಂಗಳೂರು ಇದರ ವಾರ್ಷಿಕ ಮಹಾಸಭೆ ಹಾಗೂ ಸಮವಸ್ತ್ರ ಬಿಡುಗಡೆ ಸಮಾರಂಭವು ಸೆ 23 ರಂದು ಮಂಗಳೂರಿನ ರೊಯಲ್ ಗಝಬೊ ರೆಸ್ಟೋರೆಂಟ್ ನಲ್ಲಿ ನಡೆಯಿತು.
ಸಭೆಯಲ್ಲಿ ತಂಡದ 2022-23ನೇ ಸಾಲಿನ ನಾಯಕರಾಗಿ ರಮೀಝ್ ಸಜಿಪ ಹಾಗೂ 15 ಓವರ್ ಗಳ ಪಂದ್ಯಾವಳಿಯ ನಾಯಕನಾಗಿ ಆಸಿಪ್ ಬೋಂದೆಲ್ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ವೇಳೆ ತಂಡದ 2021-22ನೇ ಸಾಲಿನ ಸಮವಸ್ತ್ರ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಸ್ಪೋಟ್ರ್ಸ್ ವಲ್ರ್ಡ್ ಮಾಲಕ ರಿನ್ನು, ಯಂಗ್ ಪ್ರಂಡ್ಸ್ ಉರ್ವ ತಂಡದ ಸಂತೋಷ್ ಜೆಪ್ಪು, ಕಿರಣ್ ರಾಜ್, ಝಮೀರ್ ಕುಂಪಲ, ಗುಡ್ ಲಕ್ ರಿಯಾಝ್, ಟೀಮ್ ಮ್ಯಾಟ್ರಿಕ್ಸ್ ತಂಡದ ಮಾಲಕ ರಿಯಾಝ್ ಮ್ಯಾಟ್ರಿಕ್ಸ್, ಇಜಾಝ್ ಬಡ್ಡೂರ್, ಅಹಮದ್ ಮುನೀರ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment