ಬಂಟ್ವಾಳ, ನವೆಂಬರ್ 11, 2022 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಮಟ್ಟದ ಕನಕದಾಸ ಜಯಂತಿ ಆಚರಣೆ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆ ಬಂಟ್ವಾಳ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ (ನ 11) ನಡೆಯಿತು.
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮವನ್ನು ತಾಲೂಕು ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಭಕ್ತಿಯ ಮಹತ್ವ ಸಾರಿದ ಕನಕದಾಸರು ತನ್ನ ಕಾಲದ ಸಮಾಜದಲ್ಲಿದ್ದ ಅಸಮಾನತೆಗಳನ್ನು ವಿರೋಧಿಸಿದರು. ಸಾಹಿತ್ಯ ಮತ್ತು ಸಂಗೀತದದ ದೃಷ್ಟಿಯಿಂದಲೂ ಕನಕದಾಸರ ಕೊಡುಗೆ ಗಣನೀಯವಾದದ್ದು. ಒನಕೆ ಓಬವ್ವ ರಾಜ ಮನೆತನದಲ್ಲಿ ಜನಿಸದೇ ಇದ್ದರೂ ವೀರರಾಣಿಯರ ಸಾಲಲ್ಲಿ ನಿಂತು ಗೌರವ ಪಡೆಯುತ್ತಿರುವವಳು. ತನ್ನ ರಾಜ್ಯವನ್ನು ಉಳಿಸಲು ಓಬವ್ವ ಮಾಡಿದ ತ್ಯಾಗ ಎಲ್ಲರಿಗೂ ಆದರ್ಶಪ್ರಾಯವಾದದ್ದು ಎಂದರು.
ಚುನಾವಣೆ ಶಾಖೆಯ ವಿಷಯ ನಿರ್ವಾಹಕ ನಾರಾಯಣ ಗೌಡ ಕನಕದಾಸರ ಹಾಗೂ ಒನಕೆ ಓಬವ್ವರವರ ಬಗ್ಗೆ ವಿವರಿಸಿದರು. ಆಹಾರ ನಿರೀಕ್ಷಕ ರವಿ ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ಸ್ವಾಗತಿಸಿ, ವಂದಿಸಿದರು.
0 comments:
Post a Comment